ಲೋಕಬಂಧು ನ್ಯೂಸ್ | ಉಡುಪಿ, ಮೇ 7
ಇಲ್ಲಿನ ಗಾಂಧಿ ಆಸ್ಪತ್ರೆ 32ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪಂಚಮಿ ಟ್ರಸ್ಟ್ ಪಂಚಲಹರಿ ಫೌಂಡೇಶನ್ ಸಹಯೋಗದಲ್ಲಿ ಮೇ 5ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಸ್ಪತ್ರೆ ವತಿಯಿಂದ ಬಾಲ ಪ್ರತಿಭೆ ಗಂಗಾ ಶಶಿಧರನ್ ಅವರಿಂದ ವಯೋಲಿನ್ ವಾದ ಕಛೇರಿ ನಡೆಯಿತು.
ಇದೇ ಸಂದರ್ಭದಲ್ಲಿ ಅವರ ಸಾಧನೆಯನ್ನು ಗುರುತಿಸಿ ಆಸ್ಪತ್ರೆ ವತಿಯಿಂದ ಒಂದು ಲಕ್ಷ ರೂ. ನಗದು ಸಹಿತ ನಾದಗಂಗಾ ಲಹರಿ ಪ್ರಶಸ್ತಿಯನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪ್ರದಾನಿಸಿ ಶುಭ ಹಾರೈಸಿದರು.
ಗಾಂಧಿ ಆಸ್ಪತ್ರೆ ಸಂಸ್ಥಾಪಕ ಎಂ.ಹರಿಶ್ಚಂದ್ರ, ಲಕ್ಷ್ಮಿ ಹರಿಶ್ಚಂದ್ರ, ಡಾ. ಪಂಚಮಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವ್ಯಾಸರಾಜ ತಂತ್ರಿ, ಡಾ.ವಿದ್ಯಾ ತಂತ್ರಿ, ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಮೊದಲಾದವರಿದ್ದರು.

