ಲೋಕಬಂಧು ನ್ಯೂಸ್ ಉಡುಪಿ, ಮೇ 17
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರಯಾಗದ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಭಾನುವಾರ ಸಂಜೆ ಭವ್ಯ ಗಂಗಾರತಿ ಕಾರ್ಯಕ್ರಮ ನೆರವೇರಿತು.
ಕಾಶಿಯಿಂದ ಆಗಮಿಸಿದ್ದ ಪುರೋಹಿತರು ವೇದಘೋಷ ಹಾಗೂ ಮಂತ್ರೋಚ್ಚಾರಣೆಯೊಂದಿಗೆ ಗಂಗಾರತಿ ಬೆಳಗಿದರು.ಮತ್ಸ್ಯಸಂಪತ್ತು ವೃದ್ಧಿಗಾಗಿ ಸಮುದ್ರರಾಜನಿಗೆ ವಿಶೇಷ ಆರತಿ ಬೆಳಗಲಾಯಿತು. ಸಮುದ್ರ ತೀರದಲ್ಲಿ ಆಕರ್ಷಕ ದೀಪಗಳೊಂದಿಗೆ ನಡೆದ ಗಂಗಾರತಿ ಭಕ್ತರ ಗಮನಸೆಳೆಯಿತು.
ಮಹಾರುದ್ರ ಯಾಗದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ನಡೆದ ಗಂಗಾರತಿ ವಿಶೇಷ ಆಕರ್ಷಣೆಯಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಭಕ್ತರು ದೀಪಾರಾಧನೆ ಸಲ್ಲಿಸಿ, ದೇವರ ಕೃಪೆಗೆ ಪ್ರಾರ್ಥಿಸಿದರು.
ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ, ಕೊಡವೂರು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಕೊಡವೂರು ಮೊದಲಾದವರಿದ್ದರು.