ಲೋಕಬಂಧು ನ್ಯೂಸ್ ಉಡುಪಿ, ಮೇ 12
ಲೋಕ ಕಲ್ಯಾಣದ ಆಶಯದೊಂದಿಗೆ ಜನಸಾಮಾನ್ಯರೂ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕೆಂಬ ವಾಂಛೆಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಮೇ 14ರಿಂದ 19ರ ವರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಹಮ್ಮಿಕೊಂಡಿರುವ ಮಹಾರುದ್ರ ಯಾಗದ ಆಹ್ವಾನ ಪತ್ರಿಕೆಯನ್ನು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ ನೀಡಿ ಆಹ್ವಾನಿಸಲಾಯತು.ಈ ಸಂದರ್ಭದಲ್ಲಿ ಯಾಗದ ಸೇವಾಕರ್ತ ಹಾಗೂ ಪ್ರಧಾನ ಸಂಚಾಲಕ ಪ್ರಸಾದ್ ರಾಜ್ ಕಾಂಚನ್, ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಕೊಡವೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಮಹಾರುದ್ರ ಯಾಗ ಸಮಿತಿಯ ಜನಾರ್ದನ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮೊದಲಾದವರಿದ್ದರು.