ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 2
ಸುಮಾರು 33 ಕೋ.ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀಣೋದ್ಧಾರಗೊಂಡ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶಿಲಾಮಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ ಶ್ರೀಕ್ಷೇತ್ರದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಶನಿವಾರ ನಡೆಯಿತು.
ಆ ಪ್ರಯುಕ್ತ ಶನಿವಾರದಂದು ದಿವಾ ಘಂಟೆ 2ರಿಂದ ಅಷ್ಟೋತ್ತರ ಶತ ನಾರಿಕೇಳ ಗಣಯಾಗ, ಮಹಾರುದ್ರ ಯಾಗ, ಗಣಪತಿ ದೇವರ ತತ್ವಕಲಶ ಪ್ರತಿಷ್ಠೆ, ತತ್ವಯಾಗ, ಈಶ್ವರ ದೇವರ ಬ್ರಹ್ಮಕುಂಭ ಸಹಿತ ಸಹಸ್ರ ದ್ರವ್ಯ ಕಲಶಾಧಿವಾಸ, ಅಧಿವಾಸ ಯಾಗ, ಕಲಶಾಭಿಷೇಕ ಆರಂಭಗೊಂಡು ಪೂರ್ವಾಹ್ನ 8.05ರ ವೃಷಭಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಿತು.
ಬಳಿಕ ಪ್ರಸನ್ನ ಪೂಜೆ, ನ್ಯಾಸ ಪೂಜೆ, ಅವಭೃತ ಬಲಿ, ಮಹಾಪೂಜೆ, ಪ್ರತ್ಯಕ್ಷ ಗೋದಾನ, ಗಣಪತಿ ದೇವರ ತತ್ವಕಲಶಾಭಿಷೇಕ, ಪ್ರಸನ್ನ ಪೂಜೆ, ನ್ಯಾಸಪೂಜೆ, ಪಲ್ಲಪೂಜೆ, ರಥಾಧಿವಾಸ, ಯಾಗ ರಥ ಸಂಪ್ರೋಕ್ಷಣೆ ನಡೆದು ಬೆಳಿಗ್ಗೆ 11 ಗಂಟೆಗೆ ರಥಾರೋಹಣ ವಿಜೃಂಭಣೆಯಿಂದ ನೆರವೇರಿ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ದುರ್ಗಾರಾಧನೆ, ರಾತ್ರಿ8 ಗಂಟೆಗೆ ಮಹಾರಥೋತ್ಸವ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವೈಭವೋಪೇತವಾಗಿ ನಡೆಯಿತು.
ಜಗದ್ಗುರು ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ದಿವ್ಯಸಾನಿಧ್ಯ ಮತ್ತು ಸಂಸ್ಥಾನ ಪೂಜೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ದಾನಿಗಳನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೊರ್ನಾಯ ಪದ್ಮನಾಭ ರಾವ್, ಆನುವಂಶಿಕ ಮೊಕ್ತೇಸರರಾದ ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿಶಂಕರ್ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ರಾವ್, ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಎಚ್.ಪದ್ಮನಾಭ ಭಟ್ ಮತ್ತು ವೈ.ಗುರುರಾಜ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ ನಡ್ಸಾಲ್ ಗುತ್ತು, ವೈ. ಸುಕುಮಾರ್, ಸಹ ಕಾರ್ಯದರ್ಶಿಗಳಾದ ನವೀನಚಂದ್ರ ಜೆ. ಶೆಟ್ಟಿ, ಸುಚರಿತ, ಉಪಾಧ್ಯಕ್ಷರಾದ ರವೀಂದ್ರನಾಥ ಜಿ. ಹೆಗ್ಡೆ, ಸದಾಶಿವ ಪಡುಬಿದ್ರಿ, ಪ್ರಶಾಂತ್ ಶೆಣೈ, ಭಾಸ್ಕರ್ ಕೆ, ಪ್ರಕಾಶ್ ದೇವಾಡಿಗ, ಸುಕುಮಾರ್ ಶ್ರೀಯಾನ್, ಸದಸ್ಯರಾದ ವೈ. ಗುರುರಾಜ್ ಭಟ್, ರಾಜೇಶ್ ಪಿ., ಪಿ.ಕೆ. ಸದಾನಂದ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ, ಉಪಾಧ್ಯಕ್ಷರಾದ ವೈ.ಎನ್. ರಾಮಚಂದ್ರ ರಾವ್, ಕೃಷ್ಣ ಶೆಟ್ಟಿ ಕಂಕಣಗುತ್ತು, ಪಿ.ಕೆ. ಸದಾನಂದ, ಅಶೋಕ್ ಸಾಲ್ಯಾನ್, ಪ್ರಶಾಂತ್ ಶೆಣೈ, ಭರತ್ ದೇವಾಡಿಗ, ಕಾರ್ಯದರ್ಶಿಗಳಾದ ಪ್ರಕಾಶ್ ದೇವಾಡಿಗ, ರಮಾಕಾಂತ್ ರಾವ್, ಗುರುಪ್ರಸಾದ್ ರಾವ್, ಪ್ರಮುಖರಾದ ಮಾತೃಮಂಡಳಿ ಗೌರವಾಧ್ಯಕ್ಷೆ ಆಶಾ ಪ್ರಕಾಶ್ ಶೆಟ್ಟಿ, ಶಕುಂತಳಾ ಬಿ. ಹೆಗ್ಡೆ, ಹೊರೆಕಾಣಿಕೆ ಸಮರ್ಪಣೆ ಸಮಿತಿ ಸಂಚಾಲಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಮಿಥುನ್ ಹೆಗ್ಡೆ, ಜಯ ಶೆಟ್ಟಿ ಪದ್ರ, ಉದಯ ಶೆಟ್ಟಿ ದರಟಗುತ್ತು, ಪೇಟೆಮನೆ ಪ್ರಕಾಶ್ ಶೆಟ್ಟಿ, ಮುರುಡಿ ಜಗದೀಶ್ ರಾವ್, ಸದಾಶಿವ ಆಚಾರ್, ವಿಷ್ಣುಮೂರ್ತಿ ಆಚಾರ್ಯ, ಶಶಿಕಾಂತ್ ಪಡುಬಿದ್ರಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸತೀಶ್ ಆಚಾರ್ಯ, ರಮಾಕಾಂತ ದೇವಾಡಿಗ, ಮುಂಬೈ ಸಮಿತಿಯ ಮಹೇಶ್ ಶೆಟ್ಟಿ, ಬೆಂಗಳೂರು ಸಮಿತಿಯ ಉಪೇಂದ್ರ ಶೆಟ್ಟಿ, ಡಾ. ವೈ.ಎನ್. ಶೆಟ್ಟಿ, ಸುಧಾ ಆರ್. ನಾವಡ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಸಂಚಾಲಕರು, ಸರ್ವ ಸದಸ್ಯರು ಊರಿನ ಹತ್ತು ಸಮಸ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.
.jpg)
.jpg)
.jpg)
.jpg)
.jpg)
