ಎಡನೀರು ಮಠದಲ್ಲಿ ಶಂಕರಾಚಾರ್ಯ ಪುತ್ಥಳಿ ಸ್ಥಾಪನೆ

ಲೋಕಬಂಧು ನ್ಯೂಸ್ ಕಾಸರಗೋಡು, ಮೇ 12
ಇಲ್ಲಿನ ಎಡನೀರು ಮಠದಲ್ಲಿ ಜಗದ್ಗುರು ಶ್ರೀ ಆದಿ ಶಂಕರ ಭಗವತ್ಪಾದಾಚಾರ್ಯರ ಪಂಚಲೋಹದ ಪ್ರತಿಮೆಯನ್ನು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಪ್ರತಿಷ್ಠಾಪಿಸಿದರು.ಈ ಸಂದರ್ಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.ಇದು ಕೇರಳದಲ್ಲಿ ಪ್ರತಿಷ್ಠಾಪಿಸಲಾದ ಆಚಾರ್ಯ ಶಂಕರರ ಮೊದಲ ಪಂಚಲೋಹದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.