ಲೋಕಬಂಧು ನ್ಯೂಸ್ | ಉಡುಪಿ, ಜು.18
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಉಡುಪಿ ಕೇಂದ್ರದಲ್ಲಿ ಲಾಸಿಕ್ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ ಜು.19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.
ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಉಪಯೋಗಿಸುತ್ತಿರುವ ಅರ್ಹ 18ರಿಂದ 40 ವರ್ಷ ಪ್ರಾಯದವರಿಗೆ ಮಾಡಬಹುದಾದ ಈ ಅತ್ಯಾಧುನಿಕ ಲೇಸರ್ ಚಿಕಿತ್ಸೆಯಿಂದ ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್'ನಿಂದ ಮುಕ್ತಿ ಹೊಂದಬಹುದಲ್ಲದೆ ಈ ಚಿಕಿತ್ಸೆಯಿಂದ ಪರಿಶುದ್ಧ ದೃಷ್ಟಿ ಪಡೆಯಬಹುದು.
ಚಿಕಿತ್ಸೆ ನಂತರ ರೋಗಿ ಕೂಡಲೇ ತನ್ನೆಲ್ಲಾ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಮಾಡಬಹುದು. ಈ ಚಿಕಿತ್ಸೆಯಿಂದ ಯಾವುದೇ ನೋವು ಉಂಟಾಗುವುದಿಲ್ಲ.
ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೋಗ್ರಾಫಿ ಸ್ಕ್ಯಾನ್ ಮೊದಲಾದವುಗಳನ್ನು ಉಚಿತವಾಗಿ ಮಾಡಲಾಗುವುದು. ಚಿಕಿತ್ಸೆಗೆ ಅರ್ಹವಾದ ರೋಗಿಗಳಿಗೆ ಲಾಸಿಕ್ ಲೇಸರ್ ನಡೆಸಲಾಗುವುದು.
ಹೆಚ್ಚಿನ ವಿವರಗಳಿಗೆ 9482863095, 8792882134ನ್ನು ಸಂಪರ್ಕಿಸುವಂತೆ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
