ಲೋಕಬಂಧು ನ್ಯೂಸ್ ಬ್ರಹ್ಮಾವರ, ಜು.21
ರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರಕೂರು, ನಮ್ಮೂರು ಬಾರಕೂರು, ಬೆನಕ ಈವೆಂಟ್ಸ್ ಕುಂದಾಪುರ ಹಾಗೂ 'ಉಡುಪಿಗೆ ಬನ್ನಿ' ಸಂಯುಕ್ತ ಆಶ್ರಯದಲ್ಲಿ ಜು.25 ಮತ್ತು 26ರಂದು ಬಾರಕೂರಿನಲ್ಲಿ ಪ್ರಥಮ ಬಾರಿಗೆ ಹಲಸು ಮೇಳ ಬಾರಕೂರು ರಥಬೀದಿಯ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.
ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆ ವರೆಗೆ ನಡೆಯುವ ಹಲಸು ಮೇಳದಲ್ಲಿ ಬಗೆ ಬಗೆಯ ಹಲಸಿನ ಖಾದ್ಯಗಳು, ಹೋಳಿಗೆ, ಜಿಲೇಬಿ, ಹಲಸು ಫುಡ್ ಸ್ಟಾಲ್, ಲೈವ್ ಕೌಂಟರ್ ಸಹಿತ ಇನ್ನಿತರ ಸ್ಟಾಲ್'ಗಳು ಇರಲಿವೆ.
ವಿಶೇಷ ಆಕರ್ಷಣೆಯಾಗಿ ಸೆಲ್ಫೀ ಸ್ಟ್ಯಾಂಡ್'ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪ್ರತಿಯೊಬ್ಬರಿಗೂ ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸಾಬೂನು ಉಚಿತವಾಗಿ ನೀಡಲಾಗುವುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.