ಲೋಕಬಂಧು ನ್ಯೂಸ್ ಉಡುಪಿ, ಜು.21
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿಯ ಕ್ರೀಡಾ ವಸತಿ ನಿಲಯದ ವಾಲಿಬಾಲ್ ವಿಭಾಗದ ಕ್ರೀಡಾಪಟು ನೈಜಾ ಆರ್. ಹೆಗ್ಡೆ ಜುಲೈ1ರಿಂದ 10ರ ವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆದ 18 ವರ್ಷ ವಯೋಮಾನದ ವಿಶ್ವ ಶಾಲಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಏಕೈಕ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.ನೈಜಾ ಹೆಗ್ಡೆ ಅವರು ಉಡುಪಿ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿಯಾಗಿದ್ದು, ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ತರಬೇತುದಾರ ರಾಜೇಶ್ ಪತ್ತಾರ ಹಾಗೂ ಅಥ್ಲೆಟಿಕ್ಸ್ ತರಬೇತುದಾರ ದೇವಣ್ಣ ನಾಯ್ಕ್ ಗೌರವಿಸಿದರು.