ಲೋಕಬಂಧು ನ್ಯೂಸ್ ಬಂಟ್ವಾಳ, ಜು.22
ಭಾರಿ ಗಾಳಿ ಮಳೆಗೆ ಇಲ್ಲಿನ ಬರಿಮಾರು ಗ್ರಾಮದ ಕಲ್ಲೇಟ್ಟಿ ದೈವಸ್ಥಾನದ ಬಳಿ ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಮರ ಬಿದ್ದು, ಆರು ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ನಡೆದಿದೆ.ಮೃತ ಬಾಲಕಿಯನ್ನು ಒಂದನೇ ತರಗತಿ ಓದುತ್ತಿದ್ದ ಚಿರ ಎಂದು ಗುರುತಿಸಲಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಇಬ್ಬರು ಮಕ್ಕಳು ಕೂಡಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ್ದು, ಹೆಚ್ಚಿನ ಮಕ್ಕಳನ್ನು ಮನೆಗೆ ಬಿಟ್ಟು ವಾಪಾಸ್ ಬರುತ್ತಿದ್ದ ಕಾರಣ ದೊಡ್ಡ ದುರಂತ ತಪ್ಪಿದೆ.