ನಮ್ಮನ್ನು ನಾವು ಉಳಿಸಿಕೊಳ್ಳಲು ಗಿಡ ನೆಡೋಣ

ಲೋಕಬಂಧು ನ್ಯೂಸ್ ಕಾಪು, ಜು.21
ನಾವು ಉಸಿರಾಡುವ ಆಮ್ಲಜನಕ ಮರಗಳಿಂದ ಲಭಿಸುತ್ತದೆ. ಅಭಿವೃದ್ಧಿಯ ಹೆಸರಲ್ಲಿ ಮರ ಕಡಿದರೆ ಮುಂದೊಂದು ದಿನ ಆಮ್ಲಜನಕದ ಕೊರತೆಯಾಗುವ ಸಂದರ್ಭ ಬಂದೀತು. ಹಾಗಾಗಿ ನಮ್ಮನ್ನು ನಾವು ಉಳಿಸಿಕೊಳ್ಳಲು ಮರ ಗಿಡಗಳನ್ನು ನೆಟ್ಟು ರಕ್ಷಿಸಬೇಕು ಎಂದು ಉಡುಪಿ ಗಸ್ತು ಅರಣ್ಯಪಾಲಕ ಕೇಶವ ಪೂಜಾರಿ ಹೇಳಿದರು.ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸ್ಥಳೀಯ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಗುವಾನಿ ಸಸಿ ವಿತರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು


ಮುಖ್ಯ ಅತಿಥಿಯಾಗಿದ್ದ ಉಡುಪಿ ಉಪ ಅರಣ್ಯಾಧಿಕಾರಿ ಮಹಮ್ಮದ್ ಜುನೈದ್, ಶಾಲಾ ಮುಖ್ಯ ಶಿಕ್ಷಕಿ ಅನುರಾಧ ಪಿ. ಶೆಟ್ಟಿ ಮಾತನಾಡಿದರು.


ಸಂಸ್ಥೆಯ ಗೌರವ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.


ಸಂಸ್ಥೆ ನಿರ್ದೇಶಕ ರಾದ ಚಂದ್ರಾವತಿ ಎಸ್. ಭಂಡಾರಿ ಮತ್ತು ಯು.ಪದ್ಮನಾಭ ಕಾಮತ್ ಇದ್ದರು. ಸಂಸ್ಥೆ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು.


ಮಾಜಿ ಅಧ್ಯಕ್ಷ ರಿಯಾಝ್ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ನಿರೂಪಿಸಿದರು. ಕೋಶಾಧಿಕಾರಿ ಸತೀಶ್ ಡಿ.ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್, ಕಾರ್ಯದರ್ಶಿ ಭಾಸ್ಕರ ಬಂಗೇರ, ಗ್ರಾ.ಪಂ.ಮಾಜಿ ಸದಸ್ಯರಾದ ನಿತಿನ್ ಜೆ. ಸಾಲ್ಯಾನ್ ಮತ್ತು ಆಬಿದ್ ಆಲಿ, ಸದಸ್ಯ ಪ್ರೇಮ್ ಮಿನೇಜಸ್ ಉಪಸ್ಥಿತರಿದ್ದರು.
ಸುಮಾರು 150 ವಿದ್ಯಾಥರ್ಿಗಳಿಗೆ ವಿವಿಧ ಗಿಡಗಳನ್ನು ವಿತರಿಸಲಾಯಿತು.