ಸೋದೆ ಕ್ಷೇತ್ರದಲ್ಲಿ ಮಹಾಭಿಷೇಕ

ಲೋಕಬಂಧು ನ್ಯೂಸ್ ಶಿರಸಿ, ಜು.30
ಸೋದೆ ವಾದಿರಾಜ ಮಠದ ಶ್ರೀ ಭೂವರಾಹ- ಹಯಗ್ರೀವ-ವೇದವ್ಯಾಸ ದೇವರಿಗೆ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಷಾಢ ಹುಣ್ಣಿಮೆಯಂದು ಬುಧವಾರ ವಾರ್ಷಿಕ ಮಹಾಭಿಷೇಕ ನೆರವೇರಿಸಿದರು.
ಈ ಪರ್ವದಿನದಲ್ಲಿ ಶ್ರೀಗಳು ತಮ್ಮ 21ನೇ ಚಾತುರ್ಮಾಸ್ಯ ಸಂಕಲ್ಪ ನೆರವೇರಿಸಿದರು.