ಪ್ರಚೋದನಕಾರಿ ಭಾಷಣ: ಶಾಸಕ ಯಶಪಾಲ್ ವಿರುದ್ಧ ದೂರು ದಾಖಲು

ಲೋಕಬಂಧು ನ್ಯೂಸ್ | ಉಡುಪಿ, ಜು.29
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ನಟ ಪ್ರಕಾಶ್ ರೈ ಹಾಗೂ‌ ದೆಹಲಿಯಲ್ಲಿ ನೀಟ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಕರಣ ದಾಖಲಿಸಿದೆ.
ಬಿಜೆಪಿ ವತಿಯಿಂದ ಉಡುಪಿಯಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಹೋರಾಟ ವಿರುದ್ಧದ ಪ್ರತಿಭಟನೆ ವೇಳೆ ಯಶಪಾಲ್ ಸುವರ್ಣ ಅವರು ರಾಹುಲ್‌ ಗಾಂಧಿ ಅವರನ್ನು 'ಡ್ರಗ್ ಎಡಿಕ್ಟ್' ಎಂದು ಕರೆದಿರುವುದು ಹಾಗೂ 'ಬಾಬರ್ ಮಸೀದಿ ಧ್ವಂಸ ಮಾಡಿದಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ' ಎಂದು ಬೆದರಿಕೆ ಒಡ್ಡಿರುವ ಬಗ್ಗೆ ಕಾಂಗ್ರೆಸ್ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ‌.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ‌ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪಕ್ಷ ಪ್ರ‌ಮುಖರಾದ ಪ್ರಸಾದ್ ರಾಜ್ ಕಾಂಚನ್, ಗಣೇಶರಾಜ್ ಸರಳೇಬೆಟ್ಟು ‌ಮೊದಲಾದವರಿದ್ದರು.