ಲೋಕಬಂಧು ನ್ಯೂಸ್ | ಉಡುಪಿ, ಜು.18
ಮಟ್ಕಾ ದಂಧೆಯಲ್ಲಿ ತೊಡಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ಆಥರ್ಿಕ ಅವ್ಯವಸ್ಥೆಗೆ ಕಾರಣನಾಗಿದ್ದ ರಾಮರಾಜ್ ಯಾನೆ ರಮೇಶ ಅರಸ್ (48)ನನ್ನು ಗಡಿಪಾರು ಆದೇಶ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ಆದೇಶ ನೀಡಿದ್ದಾರೆ.
ಇಲ್ಲಿನ ಮಠದಬೆಟ್ಟು ನಾಗಬನ ಸಮೀಪದ ಗುಲಾಬಿ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಮರಾಜ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಟ್ಕಾ ಜುಗಾರಿ ನಡೆಸಿದ ಆರೋಪಕ್ಕೆ ಸಂಬಂಧಿಸಿ ಒಟ್ಟು 5 ಪ್ರಕರಣ ದಾಖಲಾಗಿದೆ. ಆ ಪೈಕಿ 4 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 1 ಪ್ರಕರಣ ಮಾನ್ಯ ನ್ಯಾಯಾಲಯ ವಿಚಾರಣೆಯಲ್ಲಿದೆ.
ಆತನನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
