ಲಕ್ಷ್ಮೀವರತೀರ್ಥರ ಆರಾಧನೆ ಪ್ರಯುಕ್ತ ಪಾದ್ಯ ಸಮರ್ಪಣೆ

ಕೃಷ್ಣಮಠದಲ್ಲಿ ಲಕ್ಷ್ಮೀವರತೀರ್ಥ ಆರಾಧನೆ

ಲೋಕಬಂಧು ನ್ಯೂಸ್ ಉಡುಪಿ, ಜು.21
ಶೀರೂರು ಮಠದ ಪೂರ್ವ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ    ಆರಾಧನೆ ಪ್ರಯುಕ್ತ‌ ಮಂಗಳವಾರ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪಾದ್ಯ ನೀಡಿದರು.ಬಳಿಕ ಪಲ್ಲಪೂಜೆ ಸಹಿತ ಅನ್ನ ಸಂತರ್ಪಣೆ ನಡೆಯಿತು.ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಮೊದಲಾದವರಿದ್ದರು.