ಲೋಕಬಂಧು ನ್ಯೂಸ್ | ಉಡುಪಿ, ಜು.22
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಸಹಿತ ಅಷ್ಟಮಠಗಳ ಯತಿಗಳು ಶ್ರೀಕೃಷ್ಣನ ಗರ್ಭಗುಡಿಯನ್ನು ಸ್ವಚ್ಛಗೊಳಿಸಿದರು.
ಕೃಷ್ಣನ ವಿಗ್ರಹವನ್ನು ಚಾಪೆಯಿಂದ ಮುಚ್ಚಿಡಲಾಗಿತ್ತು. ಬಳಿಕ ಗುಡಿಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸಲಾಯಿತು.
ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ಮಹಾಭಿಷೇಕ
ಶುಕ್ರವಾರ ಮಹಾಭಿಷೇಕ ನಡೆಯಲಿದ್ದು, ಶನಿವಾರ ಪ್ರಥಮೈಕಾದಶಿ (ಆಷಾಢ ಏಕಾದಶಿ) ಪ್ರಯುಕ್ತ ತಪ್ತ ಮುದ್ರಾಧಾರಣೆ ನಡೆಯಲಿದೆ.
