ಸೋದೆ ವಿಶ್ವೋತ್ತಮತೀರ್ಥರ ಆರಾಧನೆ

ಲೋಕಬಂಧು ನ್ಯೂಸ್ ಶಿರಸಿ, ಆ.19
ಸೋದೆ ಮಠಾಧೀಶ ಕೀರ್ತಿಶೇಷ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರ ಆರಾಧನೆ
ಪ್ರಯುಕ್ತ ಸೋದೆಯಲ್ಲಿನ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಂಗಳವಾರ ಹಸ್ತೋದಕ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿಪ್ಪಾಣಿ ಗುರುರಾಜ ಆಚಾರ್ಯ ಅವರಿಂದ ಗುರುಸ್ಮರಣೆ ನಡೆಯಿತು.ಇದೇ ಸಂದರ್ಭದಲ್ಲಿ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳು  ಶಾಸ್ತ್ರಾನುವಾದ ಮಾಡಿದರು.