ಸಮಾಚಾರ
ಶೃಂಗೇರಿ ಶಾರದೆಗೆ ಚಾಮುಂಡಿ ಅಲಂಕಾರ
Wednesday, October 21, 2026
ಲೋಕಬಂಧು ನ್ಯೂಸ್ ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಮಹಾನವಮಿಯಂದು ಮಂಗಳವಾರ ಶ್ರೀ ಶಾರದಾಂಬೆಗೆ ಚಾಮುಂಡಿ ಅಲಂಕಾರ ಮಾಡಲಾಗಿತ್ತು.ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ವಿಶೇಷ ಪೂಜೆ ನೆರವೇರಿಸಿದರು.