ಲೋಕಬಂಧು ನ್ಯೂಸ್ ಉಡುಪಿ
ದ್ವೈತ ಮತ ಪ್ರತಿಪಾದಕ ಆಚಾರ್ಯ ಮಧ್ವರ ಜಯಂತಿಯನ್ನು ಆಚಾರ್ಯರ ಜನ್ಮಭೂಮಿ ಪಾಜಕ ಕ್ಷೇತ್ರದಲ್ಲಿ ವಿಜಯ ದಶಮಿಯಂದು ಬುಧವಾರ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.ಮಧ್ವಾಚಾರ್ಯರ ಪಾದದ ಗುರುತುಗಳಿರುವ ಶಿಲೆಯಲ್ಲಿ ಸೋದೆ ವಾದಿರಾಜ ಶ್ರೀಪಾದರಿಂದ ಪ್ರತಿಷ್ಠಾಪಿತ ಆಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಪಾರಾಯಣ, ಭಜನೆ, ಧಾರ್ಮಿಕ ಉಪನ್ಯಾಸ ಶ್ರೀಪಾದರಿಂದ ಸಂಸ್ಥಾನ ಪೂಜೆ, ಮಹಾಪೂಜೆ ನಡೆಯಿತು.
ಆಚಾರ್ಯ ಮಧ್ವರು ಅಕ್ಷರಾಭ್ಯಾಸ ಮಾಡಿದ ಶಿಲೆಯಲ್ಲಿ ನೂರಾರು ಮಕ್ಕಳು ಅಕ್ಷರಾಭ್ಯಾಸ ಆರಂಭಿಸಿದರು.