ಕೃಷ್ಣಮಠದಲ್ಲಿ ಪಶ್ಚಿಮ‌ ಜಾಗರ ಪೂಜೆ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕೃಷ್ಣಮಠದಲ್ಲಿ ಪಶ್ಚಿಮ ಜಾಗರ ಪೂಜೆ ಗುರುವಾರ ಆರಂಭಗೊಂಡಿತು.
ಧಾರ್ಮಿಕ ನಂಬಿಕೆಯಂತೆ ಆಷಾಢ ಶುದ್ಧ ಏಕಾದಶಿಯಿಂದ ಯೋಗನಿದ್ರೆಯಲ್ಲಿರುವ ಶ್ರೀಕೃಷ್ಣನನ್ನು ಎಚ್ಚರಿಸುವ ಸಂಕೇತವಾಗಿ ಆಶ್ವಯುಜ ಶುದ್ಧ ಏಕಾದಶಿಯಿಂದ ಕಾರ್ತೀಕ ಏಕಾದಶಿ ವರೆಗೆ ಈ ಪೂಜೆ ನೆರವೇರಿಸಲಾಗುತ್ತದೆ.
ಪ್ರತಿದಿನ ಮುಂಜಾವದಲ್ಲಿ ವಾದ್ಯಘೋಷ, ದೀಪಗಳ ಬೆಳಕು ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜೆ ನಡೆಯುತ್ತದೆ. ಉದಯಕಾಲದಲ್ಲಿ ನಡೆಯುವ ಈ ಪೂಜೆ ಪಕ್ಷಿಜಾಗರ ಪೂಜೆ ಎಂದೂ ಕರೆಯಲ್ಪಡುತ್ತದೆ.


ಉತ್ಥಾನ ದ್ವಾದಶಿಯಂದು‌ ಭಗವಂತ ಯೋಗನಿದ್ರೆಯಿಂದ ಎದ್ದೇಳುತ್ತಾನೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಅಲ್ಲಿಯ ವರೆಗೂ ಈ ಪೂಜೆ‌‌ ಮುಂದುವರಿಯುತ್ತದೆ.