ಪಿ.ಬಿ. ಹರೀಶ್ ರೈಗೆ ಪತ್ನಿ‌ ವಿಯೋಗ

ಲೋಕಬಂಧು ನ್ಯೂಸ್ ಮಂಗಳೂರು
ಹಿರಿಯ ಪತ್ರಕರ್ತ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರ ಪತ್ನಿ ಉಷಾಕುಮಾರಿ (56) ಅವರು ಅಸೌಖ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇಲ್ಲಿನ ಉರ್ವ ಸೈಂಟ್ ಅಲೋಶಿಯಸ್ ಹೈಸ್ಕೂಲ್'ನಲ್ಲಿ ಸುಮಾರು 26 ವರ್ಷ ಕಾಲ ಶಿಕ್ಷಕಿಯಾಗಿ ಅವರು ಸೇವೆ ಸಲ್ಲಿಸಿದ್ದರು.


ಮಂಗಳೂರಿನ ಚಿನ್ಮಯ ಹೈಸ್ಕೂಲ್ ಮತ್ತು ಉಳ್ಳಾಲದ ಭಾರತ್ ಹೈಸ್ಕೂಲ್'ನಲ್ಲಿಯೂ ಕೆಲವು ವರ್ಷ ಶಿಕ್ಷಕಿಯಾಗಿದ್ದರು.


ಮೃತರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ.