ಲೋಕಬಂಧು ನ್ಯೂಸ್ ಮೈಸೂರು
ಸ್ಟಿಂಗ್ ಆಪರೇಷನ್ ಹಿಂದೆ ಕಾಂಗ್ರೆಸ್ ಪಕ್ಷದ ಮಹಿಳೆಯೊಬ್ಬರು ಇದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ನೀಡಿದ್ದಾರೆ.ಟಿಕೆಟ್ಗಾಗಿ ಬ್ಲಾಕ್ಮೇಲ್ ಮಾಡುವ ಪ್ತಯತ್ನ ನಡೆದಿದೆ ಎಂದೂ ಅವರು ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಓರ್ವ ಮಹಿಳೆ ಈ ಪ್ರಕರಣದಲ್ಲಿದ್ದಾರೆ. ಆಕೆ ನಮ್ಮ ಪಕ್ಷದವರು. ಸ್ಟಿಂಗ್ ಮಾಡಿ ಟಿಕೆಟ್ಗೆ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದಾರೆ. ಅದರಿಂದ ನಮ್ಮ ತಂದೆಯವರು ಬೇಜಾರಿಗಿದ್ದಾರೆ.
40 ವರ್ಷ ಕಳಂಕ ಇಲ್ಲದೆ ರಾಜಕಾರಣ ಮಾಡಿದ್ದಾರೆ. ಸತ್ಯ ನಮ್ಮ ಕಡೆ ಇದೆ. ಸತ್ಯ ಹೊರಗೆ ಬರುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ತಂದೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಓರ್ವ ಪತ್ರಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಕರಣದಲ್ಲಿ ಯಾರೇ ಇದ್ದರೂ ಬಂಧಿಸುವಂತೆ ತಂದೆಯವರು ಹೇಳಿದ್ದಾರೆ.
ತನಿಖೆ ಬಗ್ಗೆ ನಂಬಿಕೆ ಇದೆ.
ತನಿಖೆ ಸರಿಯಾಗಿ ನಡೆಯುತ್ತಿದೆ. ಆಕಸ್ಮಾತ್ ತನಿಖೆ ಸರಿಯಾಗಿ ನಡೆಲಿಲ್ಲ ಎಂದರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಯತೀಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಹೆಸರು ಕೆಡಿಸಲು ಸ್ಟಿಂಗ್ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಅಲ್ಲದೆ, ಅವರ ತೇಜೋವಧೆ ಮಾಡಿ ಅವರ ಹೆಸರು ಹಾಳುಮಾಡಿ ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ನಂದಿಕಂಬ ಪೂಜೆ ವೇಳೆ ಸಚಿವರನ್ನು ತಡೆಯಬಾರದಿತ್ತು. ಐಜಿಪಿ ದರ್ಜೆಯ ಅಧಿಕಾರಿ ಯಾಕೆ ಆ ರೀತಿ ಮಾಡಿದರೋ ಗೊತ್ತಿಲ್ಲ. ಪೊಲೀಸರು ಅತಿಯಾಗಿ ವರ್ತಿಸಿ ದ್ದಾರೆ. ಸರ್ಕಾರ ತನಿಖೆಗೆ ಸೂಚನೆ ನೀಡಿದೆ. ತನಿಖೆ ನಡೆಯುತ್ತಿದೆ. ಶಿಷ್ಟಾಚಾರದ ಪ್ರಕಾರ ಮಂತ್ರಿಗಳನ್ನು ತಡೆಯಬಾರದಿತ್ತು. ಯಾರಾದರೂ ಸೂಚನೆ ಕೊಟಿದ್ದರಾ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.
ಈ ವಿಚಾರವಾಗಿಯೇ ತನಿಖೆ ನಡೆಯುತ್ತಿದೆ.
ತನಿಖಾ ತಂಡದ ಮುಂದೆ ಅಧಿಕಾರಿ ಉತ್ತರ ಕೊಡುತ್ತಾರೆ. ಮೂವರು ಕೂಡಾ ದಲಿತ ಸಚಿವರು. ಸಚಿವರಾದ ಬಾಲಕೃಷ್ಣ, ಪುಟ್ಟರಂಗಶೆಟ್ಟಿಯವರನ್ನೂ ತಡೆದಿದ್ದರು. ನಾನೇ ಸಿಎಂಗೆ ಹೇಳಿ ಬಿಡಿಸಿದ್ದೇನೆ ಎಂದು ಸಚಿ ವ ಯತೀಂದ್ರ ಹೇಳಿದರು.
ಪುಷ್ಪಾರ್ಚನೆ ಶಿಷ್ಟಾಚಾರದ ಪಟ್ಟಿಯಲ್ಲಿ ಸಿಎಂ ಪತ್ನಿ ಹಾಗೂ ಇಬ್ಬರು ಸಿಎಂಗಳ ಹೆಸರು ಇರಲಿಲ್ಲ. ಆದರೂ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿರುವುದು ತಪ್ಪೇನಲ್ಲ. ಅವರು ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಅಷ್ಟೇ. ಸಿಎಂ ಪತ್ನಿ ಸರ್ಕಾರದ ಕೆಲಸವನ್ನೇನೂ ಮಾಡಿಲ್ಲ. ಹಾಗಾಗಿ ಶಿಷ್ಟಾಚಾರ ಉಲ್ಲಂಘನೆಯಾದರೂ ತಪ್ಪೇನಿಲ್ಲ ಎಂದು ಸಮರ್ಥಿಸಿದರು.
ದಸರಾ ಸರ್ಕಾರಿ ಜಾಹಿರಾತಿನಲ್ಲಿ
ಪ್ರತಿ ಬಾರಿ ಉಸ್ತುವಾರಿ ಸಚಿವರ ಫೋಟೊ ಹಾಕಿಲ್ಲ. ನಾನು ಅದನ್ನು ಪರಿಶೀಲನೆ ಮಾಡಿದ್ದೇನೆ. ಆದರೆ, ಈ ಬಾರಿ ರಾಜಮನೆತನದವರ ಫೋಟೊ ಹಾಕಿದ್ದಾರೆ. ಸಂಸದರು ಒಂದು ಪಕ್ಷದಲ್ಲಿದ್ದಾರೆ. ಹಾಗಾಗಿ ಕಾರ್ಯಕರ್ತರು ಉಸ್ತುವಾರಿ ಸಚಿವರ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಸಚಿವ ಯತೀಂದ್ರ ಹೇಳಿದರು.