ಲೋಕಬಂಧು ನ್ಯೂಸ್ | ಉಡುಪಿ
ಶ್ರೀಮನ್ಮಧ್ವಾಚಾರ್ಯರ ಸಹೋದರ ಶ್ರೀ ವಿಷ್ಣುತೀರ್ಥರ ಪರಂಪರೆಯ ಸೋದೆ ಶ್ರೀ ವಾದಿರಾಜ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದ್ವಿತೀಯ ಶ್ರೀಕೃಷ್ಣ ಪೂಜಾ ಪರ್ಯಾಯ 2028ರ ಜ.18ರಿಂದ ಆರಂಭಗೊಳ್ಳಲಿದ್ದು, ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಪ್ರಥಮದ್ದಾದ ಬಾಳೆ ಮುಹೂರ್ತ ನ.29ರಂದು ನಡೆಯಲಿದೆ.
ಅಂದು ಬೆಳಿಗ್ಗೆ 7.45ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಲ್ಲಿ ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ ಗಿಡ, ಕಬ್ಬಿನ ಗಿಡ, ತುಳಸಿ ಗಿಡ ನೆಡುವ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.
ಆ ಧಾರ್ಮಿಕ ಆಚರಣೆ ಪೂರ್ವಾಹ್ನ 6.30ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಂತರ ಶ್ರೀ ಚಂದ್ರೇಶ್ವರ, ಶ್ರೀ ಅನಂತೇಶ್ವರ ದೇವರು ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ ಮೂಲಕ ಆರಂಭಗೊಳ್ಳಲಿದೆ.
ಈ ಸಂದರ್ಭದಲ್ಲಿ ಸೋದೆ ಮಠಾಧೀಶರೊಂದಿಗೆ ಮಠದ ದಿವಾನರು, ಆಸ್ಥಾನ ವಿದ್ವಾಂಸರು, ಪಂಡಿತರು, ಭಕ್ತಾದಿಗಳು ಹಾಗೂ ಗಣ್ಯರು ಉಪಸ್ಥಿತರಿರುವರು.
