Udupi: ಸ್ವಾಗತಿಕ‌ ರುಗ್ಮಿಣಿ ಅಲಂಕಾರ

ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನವರಾತ್ರಿಯ ನಾಲ್ಕನೇ ದಿನದ ವಿಶೇಷ ಅಲಂಕಾರ ಸೆಪ್ಟೆಂಬರ್ 25ರಂದು ಗುರುವಾರ ಉಡುಪಿ ಶ್ರೀಕೃಷ್ಣನಿಗೆ ಕೃಷ್ಣನನ್ನು ಬರಮಾಡಿಕೊಳ್ಳಲು ಕಾತರದಿಂದ ಕಾದಿರುವ ಸ್ವಾಗತಿಕ ರುಗ್ಮಿಣಿ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.