ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನವರಾತ್ರಿಯ ಆರನೇ ದಿನದ ವಿಶೇಷ ಅಲಂಕಾರ ಸೆಪ್ಟೆಂಬರ್ 27ರಂದು ಶನಿವಾರ ಉಡುಪಿ ಶ್ರೀಕೃಷ್ಣನಿಗೆ ದ್ವಿಗಜಪೂಜಿತ ಕಮಲಾಸನಸ್ಥ ಪ್ರಭಾವಳಿಮಂಡಿತ ಮುತ್ತುಲಕ್ಷ್ಮೀ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
