Udupi: ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ಭಕ್ತಗಡಣ

ಲೋಕಬಂಧು ನ್ಯೂಸ್, ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ 19ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನಡೆಯುತ್ತಿದ್ದು, ದಿನನಿತ್ಯವೂ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದೆ.ಕ್ಷೇತ್ರದಲ್ಲಿ ನಿತ್ಯವೂ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾಾರ ಪೂಜೆ, ವಿಜಯದಶಮಿ ಪರ್ವಕಾಲದಲ್ಲಿ ತ್ರಿಶಕ್ತಿ ಮಹಾಯಾಗ, ಬಲಿ ಉತ್ಸವ, ರಂಗ ಪೂಜಾ ಮಹೋತ್ಸವ, ನಿರಂತರ ಅನ್ನಸಂತರ್ಪಣೆ, ಸಾಂಸ್ಕೃತಿಕ ವೈಭವ ಹೀಗೆ ಹಲವು ಕಾರ್ಯಕ್ರಮಗಳೊಂದಿಗೆ ಕ್ಷೇತ್ರ ನವರಾತ್ರಿಯ ಸಡಗರಕ್ಕೆ ಸಾಕ್ಷಿಯಾಗಿದೆ.
ಬರಡು ಭೂಮಿಯಾಗಿದ್ದ ತಾಣ ರಮಾನಂದ ಗುರೂಜಿಯವರಿಗೆ ಅಲೌಕಿಕ ಆಧ್ಯಾತ್ಮಿಕ ಅನುಭವ ಗೋಚರಿಸಿ ಭೂಗತ ಶಕ್ತಿ ಕ್ಷೇತ್ರವನ್ನು ಪುನಶ್ಚೇತನ ಕ್ಷೇತ್ರವಾಗಿಸಿ, ಪ್ರಧಾನ ಶಕ್ತಿಯಾದ ಶ್ರೀ ದುರ್ಗಾ ಆದಿಶಕ್ತಿ ದೇವಿ ಬೇಡಿ ಬಂದ ಭಕ್ತರ ಇಷ್ಟಾರ್ಥ ಕರುಣಿಸಿ ‘ಕ್ತರ ಮನೆ ಮನ ಬೆಳಗುತ್ತಿದ್ದಾಳೆ.


ದೇವಿಯ ದರ್ಶನಕ್ಕೆ ಪ್ರಾತಃಕಾಲದಿಂದಲೇ ಕ್ಷೇತ್ರದಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ದಿನಂಪ್ರತಿ 5 ಸಾವಿರಕ್ಕೂ ಮಿಕ್ಕಿದ ಭಕ್ತರು ಕ್ಷೇತ್ರ ಸಂದರ್ಶಿಸಿದರೆ, 3 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.


 ಸಾಲಿಗ್ರಾಮ ವಿಪ್ರ ಮಹಿಳಾ ಭಜನಾ ಮಂಡಳಿ,ಕಡಿಯಾಳಿ ಮಹಿಷಮರ್ದಿನಿ ಭಜನಾ ಮಂಡಳಿಯಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನಶ್ರೀ ಸ್ಕೂಲ್ ಆಫ್ ಮ್ಯೂಸಿಕ್ ಅವರಿಂದ ಸುಗಮ ಸಂಗೀತ, ದರ್ಪಣ ಡಾನ್ಸ್ ಅಕಾಡೆಮಿ ಅವರಿಂದ ಅಭಿರಾಮ ಭರತ ನಾಟ್ಯ, ದುರ್ಗಾ ನಮಸ್ಕಾರ ಪೂಜೆ ನೆರವೇರಿತು.


ತನ್ವಿ, ಸಮನ್ವಿ , ಅಮೃತ, ಆಶ್ಲೇಷ, ಅದಿತಿ ಮೆಹಂದಳೆ, ಸಾನ್ವಿ ಮತ್ತು ಅನ್ನಪೂರ್ಣ ಅವರಿಂದ ನೃತ್ಯಸೇವೆ ನೆರವೇರಿತು.


ಅಚ್ಚುಕಟ್ಟಾದ ವ್ಯವಸ್ಥೆ
ಕ್ಷೇತ್ರದಲ್ಲಿ ಪ್ರತಿಯೊಂದು ಕಾರ್ಯವೂ ಅಚ್ಚುಕಟ್ಟಾಗಿ ನೆರವೇರುತ್ತಿದ್ದು, ಸೇವಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ನೃತ್ಯ ಸೇವಾರ್ಥಿಗಳಿಗೆ ವಿಶೇಷ ಮಾನ್ಯತೆ ದೊರಕುತ್ತಿದೆ. ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದವನ್ನು ಏಕಕಾಲದಲ್ಲಿ ಒಂದು ಸಾವಿರಕ್ಕೂ ಅಧಿಕ ಭಕ್ತರಿಗೆ ಉಣಬಡಿಸಲಾಗುತ್ತಿದೆ.


ಕ್ಷೇತ್ರದ ಅನ್ನಪೂರ್ಣಾ ಭೋಜನಾಲಯ, ಆದಿಶಕ್ತಿ ಸಭಾಭವನ, ಸರಸ್ವತಿ ಭವನಗಳಲ್ಲಿ  ಏಕಕಾಲದಲ್ಲಿ ಅನ್ನಪ್ರಸಾದ ವಿತರಣೆಯಾಗುತ್ತದೆ.  ಭಕ್ತರೂ ಕೂಡಾ ಅಷ್ಟೇ ಭಕ್ತಿಯಿಂದ ಅನ್ನಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.


ದೂರದ ಊರಿನಿಂದ ಅಸಂಖ್ಯಾತ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.


ಮಧ್ಯಾಹ್ನ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತುಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.


ವಿಶೇಷ ಅಕ್ಕಿ ಸೇವೆ 
ನವರಾತ್ರಿಯ ಪರ್ವಕಾಲದಲ್ಲಿ ಭಕ್ತರನ್ನು ಸಂತೃಪ್ತಿಗೊಳಿಸುವ ಅನ್ನ ಸಂತರ್ಪಣೆ, ಸಹಸ್ರಾರು ಭಕ್ತರು ಬರುವ ಈ ಕ್ಷೇತ್ರದಲ್ಲಿ ಬಾಳೆಎಲೆಯಲ್ಲಿಯೇ ಊಟ ಬಡಿಸುವ ಸಂಪ್ರದಾಯ ಬೆಳೆದು ಬಂದಿದೆ. ಭಕ್ತರಿಂದ ಬಫೆ ಪದ್ಧತಿ ಮಾಡುವಂತೆ ವಿನಂತಿ, ಮನವಿ, ಒತ್ತಾಯವಿದ್ದರೂ ಗುರೂಜಿಯವರು ಈ ಬಗ್ಗೆ ದೇವಿಯಲ್ಲಿ ವಿಮರ್ಶಿಸಿ ತೀರ್ಮಾನ ಕೈಗೊಳ್ಳುವ ದೃಢ ಸಂಕಲ್ಪದಲ್ಲಿದ್ದಾರೆ.


ಕ್ಷೇತ್ರದಲ್ಲಿ ಅನ್ನಪ್ರಸಾದ ದೇವಿಯ ವಿಶೇಷ ಪ್ರಸಾದವಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಸೇವೆಯಾಗಿ ಅಕ್ಕಿ ಸೇವೆಯಾದರೆ, ದೇವಿಯ ಪ್ರೇರಣೆಯಲ್ಲಿ ದೇವಿಗೆ ಅಭಿಮುಖವಾಗಿ ಅಕ್ಕಿಯ ಹುಂಡಿಯನ್ನು ಇರಿಸಲಾಗಿದ್ದು, ಭಕ್ತರು ಮನಃಸಂಕಲ್ಪ ಈಡೇರಿಕೆಗೆ ಯಥಾನುಸಾರ ಅಕ್ಕಿ ಸಮರ್ಪಿಸುತ್ತಿದ್ದಾರೆ. ಅಥವಾ ಕ್ಷೇತ್ರದಲ್ಲಿ ಅಕ್ಕಿಯ ಬದಲು ಹಣ ಸಮರ್ಪಿಸಲು ಅವಕಾಶವಿದೆ.


ಅಕ್ಕಿ ಸೇವೆ ನೀಡಿದ ಭಕ್ತರು ಮನದಿಚ್ಛೆ ಪೂರೈಸಿಕೊಂಡ ಅನೇಕ ನಿದರ್ಶನಗಳಿವೆ. ಭಕ್ತರು ಸಮರ್ಪಿಸುವ ಒಂದು ಮುಷ್ಟಿ ಅಕ್ಕಿ ಇಲ್ಲಿ ಅಕ್ಷಯವಾಗುತ್ತಿದೆ ಎಂಬುದು ಈ ಕ್ಷೇತ್ರದ ದೃಢನಂಬಿಕೆ.