ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠ ವತಿಯಿಂದ ದೀಪಾವಳಿ ಪೂರ್ವಭಾವಿಯಾಗಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶನಿವಾರ ರಾತ್ರಿ ಯಮದೀಪ ಪ್ರಜ್ವಲನೆ ಮಾಡಿದರು.ಭಾನುವಾರ (ಅ.19) ಸಂಜೆ ಜಲಪೂರಣ, ಅ.20 ಸೋಮವಾರ ನರಕ ಚತುರ್ದಶಿ- ತೈಲಾಭ್ಯಂಗ, ಸಂಜೆ ಲಕ್ಷ್ಮೀಪೂಜೆ ಮತ್ತು ಬಲೀಂದ್ರಪೂಜೆ, ಬುಧವಾರ ಅ.22ರಂದು ಗೋಪೂಜೆ ನಡೆಯಲಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.