ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ: ಮಡಿದವರಿಗೆ ಶ್ರದ್ಧಾಂಜಲಿ

ಲೋಕಬಂಧು ನ್ಯೂಸ್ | ಸುರತ್ಕಲ್, ಮೇ 23
ಬಜಪೆ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಏ‌ರ್ ಇಂಡಿಯಾ ವಿಮಾನ ದುರಂತಕ್ಕೆ 16 ವರ್ಷ ಸಂದಿವೆ. 2010ರ ಮೇ 22ರಂದು ನಡೆದ ಈ ದುರಂತದಲ್ಲಿ ವಿಮಾನದಲ್ಲಿದ್ದ ಒಟ್ಟು 166 ಜನರಲ್ಲಿ 158 ಮಂದಿ ಮೃತಪಟ್ಟಿದ್ದರು.
ದುರಂತದಲ್ಲಿ ಗುರುತು ಸಿಗದ 12 ಮಂದಿಯನ್ನು ಕೂಳೂರು ಸೇತುವೆ ಬಳಿ ದಫನ ಮಾಡಲಾಗಿದ್ದು, ಆ ಸ್ಥಳದಲ್ಲಿ ನಿರ್ಮಿಸಲಾದ ಸ್ಮಾರಕದಲ್ಲಿ ದ.ಕ. ಜಿಲ್ಲಾಡಳಿತ ವತಿಯಿಂದ ಮೇ 22ರಂದು ಶ್ರದ್ಧಾಂಜಲಿ ಸಭೆ ನಡೆಯಿತು.ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪುಷ್ಪನಮನ ಸಲ್ಲಿಸಿ ಮಾತನಾಡಿ, ಇದು ಪ್ರಪಂಚದ ಪ್ರಮುಖ ವಿಮಾನ ದುರಂತಗಳಲ್ಲಿ ಒಂದಾಗಿದ್ದು, ಇಂಥ ಘಟನೆ ಮತ್ತೆ ಮರುಕಳಿಸದಿರಲಿ ಎಂದರು.


ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಎಸಿ ಮೀನಾಕ್ಷಿ ಅಯ್ಯರ್, ತಹಶೀಲ್ದಾರ್ ರಮೇಶ್ ಬಾಬು ಟಿ., ಪಣಂಬೂರು ಪಿಐ ಮಹಮ್ಮದ್ ಸಲೀಂ ಅಬ್ಬಾಸ್, ಮಂಗಳೂರು ವಿಮಾನ ನಿಲ್ದಾಣ ಅಧಿ ಕಾರಿಗಳು, ಅದಾನಿ ಸಂಸ್ಥೆಯ ಕಿಶೋರ್ ಆಳ್ವ ಮೊದಲಾದವರಿದ್ದರು.