ಭಾಗವತ ಪ್ರವಚನ ಸಪ್ತಾಹಕ್ಕೆ ಚಾಲನೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 20
ಪಣಿಯಾಡಿ ಶ್ರೀ ಅನಂತಾನಂತ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅಧಿಕ ಮಾಸ ಪ್ರಯುಕ್ತ ಆಯೋಜಿಸಲಾಗಿರುವ ಭಾಗವತ ಪ್ರವಚನ ಸಪ್ತಾಹಕ್ಕೆ ದೇವಾಲಯದ ಪ್ರಧಾನ ಅರ್ಚಕ ಕೆ.ರಾಘವೇಂದ್ರ ಭಟ್ ಚಾಲನೆ ನೀಡಿದರು.
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಸೇವಾಕರ್ತರಾದ  ರಾಮಚಂದ್ರ- ಅನಸೂಯ ಆಚಾರ್ಯ ದಂಪತಿ, ಕೃಷ್ಣಮೂರ್ತಿ ಆಚಾರ್ಯ, ಅನಂತ ವಿಪ್ರ ಬಳಗದ ರಘುಪತಿ- ಸವಿತಾ ಭಟ್ ದಂಪತಿ ಮೊದಲಾದವರಿದ್ದರು.


ಪಣಿಯಾಡಿ ಕೆ. ರಾಘವೇಂದ್ರ ಭಟ್ ಸ್ವಾಗತಿಸಿ, ನಿರೂಪಿಸಿದರು. ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಅವರಿಂದ ಪ್ರವಚನ ನಡೆಯಿತು.