ಮೇ 19: ಸಂಸದ ಕೋಟ ಜೊತೆ 'ತಿಂಗಳ ಅಂಗಳ'

ಲೋಕಬಂಧು ನ್ಯೂಸ್ ಉಡುಪಿ,‌ ಮೇ 17
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 'ತಿಂಗಳ ಅಂಗಳ' ಕಾರ್ಯಕ್ರಮ ಹಾಗೂ ಏಪ್ರಿಲ್ ತಿಂಗಳ 'ಸನ್ಮತಿ' ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮೇ 19ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಪತ್ರಿಕಾ ಭವನದಲ್ಲಿ ನಡೆಯಲಿದೆ.
ತಿಂಗಳ ಅಂಗಳ ಸಂವಾದದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಕರ್ತರ ಸಂಘದ ಪ್ರಕಟಣೆ ತಿಳಿದಿದೆ.