ಮೇ 25: ಧರ್ಮಸ್ಥಳದಲ್ಲಿ ಪತ್ತನಾಜೆ ಉತ್ಸವ

ಲೋಕಬಂಧು ನ್ಯೂಸ್ | ಉಜಿರೆ, ಮೇ 23
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮೇ 25ರಂದು ಸೋಮವಾರ ಹತ್ತನಾವಧಿ (ಪತ್ತನಾಜೆ) ಉತ್ಸವ ನಡೆಯಲಿದೆ.
ಮುಂದೆ ದೀಪಾವಳಿ ವರೆಗೆ ದೇವಸ್ಥಾನದಲ್ಲಿ ಉತ್ಸವ, ರಂಗಪೂಜೆ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ.


ಧರ್ಮಸ್ಥಳ ಯಕ್ಷಗಾನ ಮಂಡಳಿಯ ಕಲಾವಿದರು ಮೂರು ದಿನ ಸೇವೆ ಬಯಲಾಟ ಪ್ರದರ್ಶನ ನೀಡಿ ಪ್ರಸಕ್ತ ವರ್ಷದ ಸೇವಾ ಬಯಲಾಟ ಪ್ರದರ್ಶನಕ್ಕೆ ಮಂಗಳ ಹಾಡುವರು.