ಅನಿಲ ಸಮಸ್ಯೆ: ಮೇ 6ರಂದು ಸನ್ನದುದಾರರ ಸಭೆ

ಲೋಕಬಂಧು ನ್ಯೂಸ್ ಉಡುಪಿ, ಮೇ 5
ಆಹಾರ ತಯಾರಿಸುವ ಸನ್ನದುದಾರರಿಗೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ಮೇ 6ರಂದು ಜಿಲ್ಲೆಯ ಸನ್ನದುದಾರರ ಸಭೆ ಕರೆಯಲಾಗಿದೆಎಂದು ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.ಜಿಲ್ಲೆಯ ಎಲ್ಲಾ ವರ್ಗದ ಮುಖ್ಯವಾಗಿ ಸಿಎಲ್ 9, ಸಿಎಲ್ 7 ಮತ್ತು ಸಿಎಲ್ ಸನ್ನದುದಾರರಿಗೆ ಕಳೆದ ಸುಮಾರು ಎರಡು ತಿಂಗಳಿಗೂ ಅಧಿದ ಸಮಯದಿಂದ ಅಡುಗೆ ಅನಿಲ ಸರಬರಾಜು ಅಗುತ್ತಿಲ್ಲ. ಆದರೆ, ಕಾಳಸಂತೆಯಲ್ಲಿ ಗ್ಯಾಸ್ ಸಿಗುತ್ತಿದೆ. ಕ್ಯಾಟರಿಂಗ್ ಸಂಸ್ಥೆಗಳಿಗೆ ಅನಿಲ ಸಿಗುತ್ತಿದೆ. ಸರ್ಕಾರಕ್ಕೆ ಜಿಎಸ್‌ಟಿ ಮತ್ತು ಅಬಕಾರಿ ತೆರಿಗೆ ಪಾವತಿಸುವ ಮದ್ಯ ಮಾರಾಟ ಸನ್ನದುಗಳಿಗೆ ಅನಿಲ ಸಿಗುತ್ತಿಲ್ಲ.
ಈ ಕುರಿತು ಚರ್ಚಿಸಿ ಬೃಹತ್ ಹೋರಾಟ ಸಂಘಟಿಸುವ‌ ಜೊತೆಗೆ ಕಳೆದ ಮೂರು ತಿಂಗಳಿನಿಂದ ಅನಿಲ ವಿತರಕ ಏಜೆನ್ಸಿಗಳ ಗ್ಯಾಸ್ ಸರಬರಾಜು ಕುರಿತು ಪಬ್ಲಿಕ್ ಆಡಿಟ್ ಮಾಡುವಂತೆ ಮತ್ತು ಜಿಎಸ್‌ಟಿ ವಿನಾಯಿತಿ ನೀಡುವಂತೆ ಒತ್ತಾಯಿಸಲು ಮೇ 6ರಂದು ಅಪರಾಹ್ನ 4.30ಕ್ಕೆ ಹೋಟೆಲ್ ಶಾರದಾದಲ್ಲಿ ಸಭೆ ಆಯೋಜಿಸಲಾಗಿದೆ. ಮದ್ಯ ಮಾರಾಟ ಸನ್ನದುದಾರರಲ್ಲದೆ ಇತರರು ಕೂಡಾ ಸಭೆಯಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಗೋವಿಂದರಾಜ್ ಹೆಗ್ಡೆ ಮತ್ತು ಪ್ರಧಾ‌ನ ಕಾರ್ಯದರ್ಶಿ ಎಂ. ಜನಾರ್ದನ ಪೂಜಾರಿ ಪ್ರಕಟಣೆ ತಿಳಿಸಿದೆ.