ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 3
ಸಮಗ್ರ ಜೀರ್ಣೋದ್ಧಾರಗೊಂಡಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಉಪಸ್ಥಾನಾಧಿಪತಿಯಾಗಿ ಮೆರೆಯುತ್ತಿರುವ ಶ್ರೀ ಮಹಾಗಣಪತಿ ದೇವರಿಗೆ ಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಭಾನುವಾರ ಬ್ರಹ್ಮಕಲಶೋತ್ಸವ ನೆರವೇರಿತು.
ಮುಂಜಾನೆ ಕವಾಟೋದ್ಘಾಟನೆ, ದಂತಧಾವನಾದಿ ಪ್ರಕ್ರಿಯೆಗಳು, ಸುವರ್ಣೋತ್ಸವ, ಅಷ್ಟೋತ್ತರಶತ ನಾರಿಕೇಲ ಗಣಯಾಗ, ಮಹಾರುದ್ರ ಯಾಗ, ಗಣಪತಿ ದೇವರ ಬ್ರಹ್ಮಕುಂಭ ಸಹಿತ ತ್ರಿಶತ ಕಲಶಾಧಿವಾಸ, ಅಧಿವಾಸ ಯಾಗ ಸಂಪನ್ನಗೊಂಡಿತು.
ಬಳಿಕ ಪ್ರಸನ್ನ ಪೂಜೆ, ನ್ಯಾಸಪೂಜೆ, ರುದ್ರದೇವರಿಗೆ ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ, ಬಲಿ ಪಲ್ಲಪೂಜೆ ನಡೆಯಿತು.
ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿ ಸಂಸ್ಥಾನ ಪೂಜೆ ನೆರವೇರಿಸಿದರು.
ಬಳಿಕ ನಡೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸಂಜೆ ದುರ್ಗಾರಾಧನೆ, ಸಂಹಾರ ಬಲಿ, ಓಕುಳಿ, ಅವಭೃತ, ಧ್ವಜಾವರೋಹಣ, ರಾತ್ರಿ ಪೂಜೆ, ನಿತ್ಯ ಬಲಿ ಜರಗಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹಾಗೂ ಶ್ರೀದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಆಶಾ ಪ್ರಕಾಶ್ ಶೆಟ್ಟಿ, ಶಕುಂತಳಾ ಬಿ ಹೆಗ್ಡೆ, ಮುಂಬಯಿ ಸಮಿತಿಯ ಮಹೇಶ್ ಶೆಟ್ಟಿ, ಪುಣೆ ಸಮಿತಿಯ ಸಂತೋಷ್ ಶೆಟ್ಟಿ ಕುರ್ಕೆಲ್ ಬೆಟ್ಟು, ಬೆಂಗಳೂರು ಸಮಿತಿಯ ಉಪೇಂದ್ರ ಶೆಟ್ಟಿ, ಮುಂಬಯಿ ಉದ್ಯಮಿ ಕೃಷ್ಣ ಶೆಟ್ಟಿ ದಂಪತಿ, ಸಾಂತೂರು ಭಾಸ್ಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ನವೀನ್ ಚಂದ್ರ ಜೆ. ಶೆಟ್ಟಿ, ನವೀನ್ ಶೆಟ್ಟಿ, ಮುರಳೀನಾಥ ಶೆಟ್ಟಿ, ವೈ. ಎನ್. ರಾಮಚಂದ್ರ ರಾವ್, ರಮಾಕಾಂತ ರಾವ್, ಜಗದೀಶ ರಾವ್ ಮುರುಡಿ, ವಿಷ್ಣುಮೂರ್ತಿ ಆಚಾರ್ಯ, ಪ್ರಕಾಶ್ ದೇವಾಡಿಗ, ಪಿ. ಕೆ. ಸದಾನಂದ, ಪ್ರಶಾಂತ್ ಶೆಣೈ, ಸದಾಶಿವ ಪಡುಬಿದ್ರಿ, ಅಶೋಕ್ ಸಾಲ್ಯಾನ್, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸರ್ವ ಸದಸ್ಯರು, ಶ್ರೀ ದೇವಳದ ಸಿಬಂದಿ ವರ್ಗ, ಗ್ರಾಮ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಮೇ 4ರಂದು ಮಂಗಳ ಮಂತ್ರಾಕ್ಷತೆ
ಮೇ 4ರಂದು ಸೋಮವಾರ ಬೆಳಗ್ಗೆ 7 ಗಂಟೆಯಿಂದ ಶತರುದ್ರಾಭಿಷೇಕ, ಮಹಾರುದ್ರ ಮತ್ತು ಗಣಪತಿ ಆಯುತ ಗಾಯತ್ರೀಮಂತ್ರ ಯಾಗ, ಮಹಾರುದ್ರಯಾಗ, ಅಷ್ಟೋತ್ತರಶತ ನಾರಿಕೇಲ ಗಣಯಾಗ, ಸಂಪ್ರೋಕ್ಷಣೆ, ಮಹಾಪೂಜೆ, ನಿತ್ಯಬಲಿ, ಮಹಾಮಂತ್ರಾಕ್ಷತೆ, ಮಂಗಳ ಪ್ರಸಾದ ನಡೆಯಲಿದೆ.
ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿ ಸಂಸ್ಥಾನಪೂಜೆ ನೆರವೇರಿಸುವರು.
ಸಂಜೆ 6 ಗಂಟೆಯಿಂದ ದುರ್ಗಾರಾಧನೆ. ರಾತ್ರಿ 9 ಗಂಟೆಗೆ ಲಕ್ಷದೀಪೋತ್ಸವ, ವಾರ್ಷಿಕ ಉತ್ಸವಾಂಗತ್ವ ಅಂಕುರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
.jpg)
.jpg)