ಉಚ್ಚಿಲ ದೇವಳಕ್ಕೆ ನಟ ಜಗ್ಗೇಶ್ ಭೇಟಿ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 3
ನವರಸ ನಾಯಕ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ರವಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರದ ವತಿಯಿಂದ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.


ಶ್ರೀಕ್ಷೇತ್ರದ ಅಧ್ಯಕ್ಷ ಗಿರಿಧರ್ ಸುವರ್ಣ, ಶೇಖರ್ ಪುತ್ರನ್, ಪುರೋಹಿತರಾದ ಶ್ರೀನಿವಾಸ್ ಉಪಾಧ್ಯಾಯ ಮತ್ತು ಶ್ರೀಶ ಉಪಾಧ್ಯಾಯ, ಪದ್ಮನಾಭ ಕೋಟ್ಯಾನ್ ಮುಂತಾದವರಿದ್ದರು.