ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ವಾರೆಂಟ್‌

ಲೋಕಬಂಧು ನ್ಯೂಸ್ ದಾವಣಗೆರೆ, ಮೇ 6
ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ವಾರೆಂಟ್‌ ಹೊರಡಿಸಿದೆ.ಜಾತಿ ನಿಂದನೆ ಪ್ರಕರಣವೊಂದರ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ನ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್‌ ಅವರು ಬಂಧನದ ವಾರೆಂಟ್‌ ಜಾರಿ ಮಾಡಿದ್ದಾರೆ.


ಮೇ 7ರಂದು ಶಾಸಕರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಹರಿಹರ ನಗರ ಪೊಲೀಸ್ ಠಾಣಾಧಿಕಾರಿಗೆ ಕೋರ್ಟ್‌ ಆದೇಶಿಸಿದೆ.


2023ರ ವಿಧಾನಸಭೆಯ ಚುನಾವಣಾ ಫಲಿತಾಂಶದ ಮರುದಿನ ದಲಿತ ಸಮಾಜದ ಬಗ್ಗೆ ಶಾಸಕ ಬಿ.ಪಿ.ಹರೀಶ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹರಿಹರ ಬಿಎಸ್ಪಿ ಮುಖಂಡ ಹನುಮಂತಪ್ಪ ಎಂಬವರು ಹರಿಹರನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.