ಕಾಕ್ರೋಚ್ ಜನತಾ ಪಾರ್ಟಿಯಿಂದ ಬಿಜೆಪಿ ವಿಚಲಿತ

ಲೋಕಬಂಧು ನ್ಯೂಸ್ | ಬಾಗಲಕೋಟೆ, ಮೇ 23
ಕಾಕ್ರೋಚ್ ಜನತಾ ಪಾರ್ಟಿಯಿಂದ ಬಿಜೆಪಿಯವರು ವಿಚಲಿತರಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕಾಕ್ರೋಚ್ ಜನತಾ ಪಾರ್ಟಿ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ನಿರ್ಲಕ್ಷ್ಯ ಮಿತಿ ಮೀರಿದರೆ ಇಂಥದೆಲ್ಲ ಅನಿವಾರ್ಯ. ಇತಿಹಾಸದಲ್ಲಿ ಜನ ಎಲ್ಲ ಪಕ್ಷಗಳನ್ನೂ ಸೋಲಿಸಿದ್ದಾರೆ. ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ವಾಜಪೇಯಿ ಸರ್ಕಾರಗಳನ್ನೂ ಸೋಲಿಸಿದ್ದಾರೆ. ಆಳುವವರು ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದರು.


ಕಾಕ್ರೋಚ್ ಪಕ್ಷಕ್ಕೆ ಶೇ. 40 ಪಾಕಿಸ್ತಾನದ ಫಾಲೋವರ್ಸ್ ಇದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಹೇಳಿಬಿಟ್ಟಿರೆ ವಿಷಯಾಂತರವಾಗುತ್ತದೆ ಎಂಬುದನ್ನು ಅರಿತು ಹೇಳುತ್ತಾರೆ. ಸಿಜೆಪಿಯವರ ಖಾತೆಗಳನ್ನೂ ತಡೆಯುತ್ತಿದ್ದಾರೆ. ಬಿಜೆಪಿಯವರು ಅದರಿಂದ ವಿಚಲಿತರಾಗಿದ್ದಾರೆ ಎಂಬುದಂತೂ ಸತ್ಯ ಎಂದರು.


ಸಿಎಂ ಸಿದ್ದರಾಮಯ್ಯ ಕಾಕ್ರೋಚ್ ಜನತಾ ಪಾರ್ಟಿ ಟಿ ಶರ್ಟ್ ಪ್ರದರ್ಶನ ಮಾಡಿರುವ ವಿಷಯಕ್ಕೆ ಉತ್ತರಿಸಿದ ಅವರು, ಎಲ್ಲರೂ ಬಿಜೆಪಿ ದುರಾಡಳಿತದ ವಿರುದ್ಧ ಒಂದು ವೇದಿಕೆಯಲ್ಲಿ ಬರಬೇಕಿದೆ ಎಂದರು.