ಮೂಳೆಮಜ್ಜೆ ಚಿಕಿತ್ಸೆಯ ಮಕ್ಕಳಿಗಾಗಿ ಆರೈಕೆ ಕೇಂದ್ರ

ಲೋಕಬಂಧು ನ್ಯೂಸ್ | ಉಡುಪಿ, ಮೇ 23
ವೈದ್ಯಕೀಯೇತರ ಸವಾಲುಗಳಿಂದಾಗಿ ಯಾವುದೇ ಮಗು ಕ್ಯಾನ್ಸರ್ ಚಿಕಿತ್ಸೆಯನ್ನು ತ್ಯಜಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬದ್ಧವಾಗಿರುವ ನೋಂದಾಯಿತ ಭಾರತೀಯ ಲಾಭರಹಿತ ಸಂಸ್ಥೆ ಆಕ್ಸೆಸ್ ಲೈಫ್, ಮಕ್ಕಳ ಮೂಳೆಮಜ್ಜೆ ಕಸಿ ರೋಗಿಗಳಿಗಾಗಿ ಮಣಿಪಾಲದಲ್ಲಿ 'ಹೋಮ್ ಅವೇ ಫ್ರಮ್ ಹೋಮ್' ಕೇಂದ್ರ ಸ್ಥಾಪಿಸಿದ್ದು ಶನಿವಾರ ಮಣಿಪಾಲ ಮಾಹೆ ಕ್ಯಾಂಪಸ್ ನಲ್ಲಿ ಉದ್ಘಾಟಿಸಲಾಯಿತು.
ಮಣಿಪಾಲ ಮಾಹೆ ಸಹಕುಲಾಧಿಪತಿ  ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಮುಂಬೈನ ಚೆಲ್ಲಾರಾಮ್ ಫೌಂಡೇಶನ್'ನ ಭಾರತದ ಮುಖ್ಯಸ್ಥ ಡಾ. ಅಶೋಕ್ ಗವಾಂಡೆ ಮುಖ್ಯ ಅತಿಥಿಯಾಗಿದ್ದರು.


ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್'ನ ಮುಖ್ಯ ಕಾರ್ಯಾಚರಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಗೌರವ ಅತಿಥಿಯಾಗಿದ್ದರು.


ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕಾಲೇಜಿನ ಡೀನ್ ಡಾ.ಅನಿಲ್ ಕೆ ಭಟ್, ಮಣಿಪಾಲ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿನಾರಾಯಣ್ ಶರ್ಮ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ., ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸ್ಥಾಪಕ ಮತ್ತು ಅಧ್ಯಕ್ಷ ಗಿರೀಶ್ ನಾಯರ್, ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಂಕಿತ್ ದೇವ್ ಇದ್ದರು