ದಾವಣಗೆರೆ ದಕ್ಷಿಣ: 'ಸಮರ್ಥ' ಗೆಲುವು

ಲೋಕಬಂಧು ನ್ಯೂಸ್ | ದಾವಣಗೆರೆ, ಮೇ 4
ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 5,708 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಮತ ಎಣಿಕೆಗೆ ನಿಗದಿಯಾಗಿದ್ದ 21ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದರೂ ಮೂರು ಇವಿಎಂಗಳ ವಿ.ವಿ. ಪ್ಯಾಟ್ ಎಣಿಕೆ ಬಾಕಿ ಇತ್ತು. ತಾಂತ್ರಿಕ ಸಮಸ್ಯೆಯಿಂದ ಈ ಮತಯಂತ್ರಗಳು ಕಾರ್ಯನಿರ್ವಹಿಸದೇ ಇರುವುದರಿಂದ ವಿ.ವಿ. ಪ್ಯಾಟ್ ಎಣಿಕೆ ವಿಳಂಬವಾಯಿತು.


21ನೇ ಸುತ್ತು ಪೂರ್ಣಗೊಂಡಾಗ ಕಾಂಗ್ರೆಸ್ 4,873 ಮತಗಳ ಮುನ್ನಡೆ ಸಾಧಿಸಿತ್ತು.


ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 69,578 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ ದಾಸಕರಿಯಪ್ಪ 63,870 ಹಾಗೂ ಎಸ್‌ಡಿಪಿಐ ಅಭ್ಯರ್ಥಿ ಅಪ್ಪ‌ರ್ ಕೊಡ್ಲಿಪೇಟೆ 18,975 ಮತಗಳನ್ನು ಪಡೆದಿದ್ದಾರೆ.