ನೇಪಾಲಕ್ಕೆ ಶೃಂಗೇರಿ ಜಗದ್ಗುರುಗಳ ಧರ್ಮ ವಿಜಯ ಯಾತ್ರೆ

ಲೋಕಬಂಧು ನ್ಯೂಸ್ | ಶೃಂಗೇರಿ, ಮೇ 22
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ನೇಪಾಲ ದೇಶಕ್ಕೆ ಮೇ  27ರ ವರೆಗೆ ಧರ್ಮ ವಿಜಯ ಯಾತ್ರೆ ಕೈಗೊಂಡಿದ್ದಾರೆ.
ಶ್ರೀಮಠದಿಂದ ಮೇ 22ರಂದು ಮಂಗಳೂರಿಗೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಕಠ್ಮಂಡುವಿಗೆ ತೆರಳಿ ನೇಪಾಲದ ವಿವಿಧೆಡೆ ಸಂಚಾರ ನಡೆಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.


ಈಗಾಗಲೇ 200ಕ್ಕೂ ಹೆಚ್ಚು ಪುರೋಹಿತರ ತಂಡ ನೇಪಾಲ ತಲುಪಿದೆ. ಕಠ್ಮಂಡುವಿನ ಶ್ರೀ ಪಶುಪತಿನಾಥ, ಮುಕ್ತಿನಾಥ ಮಂದಿರ ಸೇರಿದಂತೆ ವಿವಿಧೆಡೆಗಳಿಗೆ ಶ್ರೀಗಳು ತೆರಳಲಿದ್ದಾರೆ.


ಜಗದ್ಗುರುಗಳೊಂದಿಗೆ ಶ್ರೀ ಮಠದ ಆಡಳಿತಾಧಿಕಾರಿ ಪಿ. ಎ. ಮುರಳಿ ಸಹಿತ ಪುರೋಹಿತರ ತಂಡ ತೆರಳಿದೆ.