ಪ್ರಾಮಾಣಿಕ ಪ್ರಯತ್ನದ ಸಂಕಲ್ಪ ಸಿದ್ಧಿಗೆ ದೈವಿಕ ಅನುಗ್ರಹ ಪ್ರೇರಣೆ

ಲೋಕಬಂಧು ನ್ಯೂಸ್ ಪಡುಬಿದ್ರಿ, ಮೇ 6
ಮನುಷ್ಯನ ಎಲ್ಲಾ ಪ್ರಾಮಾಣಿಕ ಪರಿಶ್ರಮದ ಪ್ರಯತ್ನದ ಸಂಕಲ್ಪಗಳು ಸಿದ್ಧಿಯಾಗಲು ದೈವಿಕ ಅನುಗ್ರಹವೇ ಪ್ರೇರಣೆಯಾಗಲಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಚಂಡಿಕಾಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಆಶೀರ್ವದಿಸಿ, ಅನುಗ್ರಹ ಸಂದೇಶ ನೀಡಿದರು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನಿರಂತರ ಪ್ರಗತಿ, ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಸಮಾಜಕ್ಕೆ ಆರ್ಥಿಕ ಚೈತನ್ಯ ತುಂಬುವ ಸಂಕಲ್ಪದೊಂದಿಗೆ ನಡೆಸಿದ ಚಂಡಿಕಾಯಾಗದ ಮೂಲಕ ದೇವರ ಅನುಗ್ರಹದಿಂದ ಬ್ಯಾಂಕಿನ ಅಧ್ಯಕ್ಷ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಮುಂದಿನ ಯೋಜನೆಗಳು ಸಾಕಾರವಾಗಲಿ ಎಂದು ಹಾರೈಸಿದರು.


ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಹಾಲಕ್ಷ್ಮೀ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಯ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿ, ಸಿಬ್ಬಂದಿ ವರ್ಗದ  ಸೇವೆಯ ಮೂಲಕ ಉತ್ತಮ ಸಹಕಾರಿ ಸಂಸ್ಥೆಯಾಗಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಚಂಡಿಕಾಯಾಗ ನಡೆಸಿದ್ದು, ಆ ಮೂಲಕ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ದೇವರು ಹಾಗೂ ಸಮಾಜದ ಸರ್ವರ ಸಹಕಾರ ಸಿಗುವಂತಾಗಲಿ ಎಂದರು

ಉಚ್ಚಿಲ ಮಹಾಲಕ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ತಂತ್ರಿ ನೇತೃತ್ವದಲ್ಲಿ ಚಂಡಿಕಾಯಾಗ ಸಂಪನ್ನಗೊಂಡಿತು.


ಈ ಸಂದರ್ಭದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕೋಲಾರದ ಮಾಜಿ ಸಂಸದ ಮುನಿಸ್ವಾಮಿ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ಆನಂದ ಪಿ. ಸುವರ್ಣ, ಸಾಧು ಸಾಲ್ಯಾನ್, ರಾಮಚಂದ್ರ ಕುಂದರ್, ನಾಗರಾಜ ಸುವರ್ಣ, ಕೃಷ್ಣ ಸುವರ್ಣ, ಸುಭಾಷ್ ಮೆಂಡನ್, ಹಿರಿಯಣ್ಣ ಕಿದಿಯೂರು, ದಯಾನಂದ ಕುಂದರ್, ಕರುಣಾಕರ ಸಾಲ್ಯಾನ್, ಚೇತನ್ ಬೆಂಗ್ರೆ, ಗಣ್ಯರಾದ ಭುವನೇಂದ್ರ ಕಿದಿಯೂರು, ಪುರುಷೋತ್ತಮ ಶೆಟ್ಟಿ, ಅಜಯ್ ಪಿ. ಶೆಟ್ಟಿ, ಮನೋಹರ ಶೆಟ್ಟಿ, ಸತ್ಯನಾಥ ಶೆಟ್ಟಿ ಹಿರಿಯಡ್ಕ, ಅಮರನಾಥ ಶೆಟ್ಟಿ ಹಿರಿಯಡ್ಕ, ಡಾ.ಜಿ. ಎಸ್. ಚಂದ್ರಶೇಖರ್, ಎಂ.ಹರಿಶ್ಚಂದ್ರ, ಗೋಪಾಲಕೃಷ್ಣ ಸಾಮಗ, ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ, ದಿವಾಕರ ಶೆಟ್ಟಿ ತೋಟದಮನೆ, ಮಟ್ಟಾರು ರತ್ನಾಕರ ಹೆಗ್ಡೆ, ರಾಜೇಶ್ ಶೆಟ್ಟಿ ಬಿರ್ತಿ, ಪ್ರತಾಪ್ ಹೆಗ್ಡೆ ಮಾರಾಳಿ, ಹರೀಶ್ ಶೆಟ್ಟಿ ಚೇರ್ಕಾಡಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಿರಣ್ ಕುಮಾರ್ ಬೈಲೂರು, ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಕಮಲಾಕ್ಷ ಹೆಬ್ಬಾರ್, ರಾಜೀವ್ ಕುಲಾಲ್, ದಿನೇಶ್ ಅಮೀನ್, ಸಂಧ್ಯಾ ರಮೇಶ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವೀಣಾ ಶೆಟ್ಟಿ,  ಗೀತಾಂಜಲಿ ಸುವರ್ಣ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಜಿತೇಂದ್ರ ಶೆಟ್ಟಿ ಉದ್ಯಾವರ, ಯೋಗೀಶ್ ಶೆಟ್ಟಿ ಬಾಲಾಜಿ, ಉಚ್ಚಿಲ ಮಹಾಲಕ್ಮೀ ದೇವಸ್ಥಾನದ ಅಧ್ಯಕ್ಷ ಗಿರಿಧರ ಸುವರ್ಣ, ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಸದಸ್ಯರು ಹಿತೈಷಿಗಳು ಉಪಸ್ಥಿತರಿದ್ದರು.