ಲೋಕಬಂಧು ನ್ಯೂಸ್ | ಮೈಸೂರು, ಮೇ 25
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಪಕ್ಷ ಬೇರೆ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧ. ರಾಜ್ಯಸಭೆಗೆ ನಾನು ಕೂಡಾ ಆಕಾಂಕ್ಷಿ ಎಂದು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಧ್ಯಕ್ಷರನ್ನು ಬದಲಾವಣೆ ಮಾಡುವುದು ನಾವಲ್ಲ. ಹೈಕಮಾಂಡ್ ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಈಗಾಗಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರ ಕಾಲಾವಧಿ ಮುಗಿಯಲಿ, ಬಳಿಕ ವರಿಷ್ಠರು ಬದಲಾವಣೆಯ ಅವಶ್ಯಕತೆ ಇದ್ದರೆ ನಾಲ್ಕು ಗೋಡೆಗಳ ಮಧ್ಯೆ ತೀರ್ಮಾನ ಮಾಡಲಿದ್ದಾರೆ. ಅದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಜನರು ಬೇಸತ್ತಿದ್ದಾರೆ. ಈಗ ಚುನಾವಣೆ ನಡೆದರೆ ಕಾಂಗ್ರೆಸ್ 50 ಸೀಟು ಪಡೆಯುವುದೂ ಕಷ್ಟ. ಹಾಗಾಗಿ ಕಾಂಗ್ರೆಸ್ ಎಸ್‌ಐಆರ್ ಸೇರಿದಂತೆ ಎಲ್ಲವನ್ನೂ ವಿರೋಧ ಮಾಡುತ್ತಿದೆ. ಜನರೇ ಕಾಂಗ್ರೆಸ್‌ಗೆ ಉತ್ತರ ಕೊಡುವ ಕೆಲಸ ಮಾಡುತ್ತಾರೆ ಎಂದರು.
ಕಾಕ್ರೋಚ್ ಜನತಾ ಪಾರ್ಟಿಗೆ ಶೀಘ್ರದಲ್ಲಿ ಮುಕ್ತಿ ಸಿಗತ್ತದೆ. ಮನೆಯಲ್ಲಿ ಜಿರಳೆ ಕಂಡರೆ ಔಷಧಿ ಹಾಕುತ್ತಾರೆ. ನಾವು ಕೂಡಾ ಜಿರಳೆಗಳಿಗೆ ಔಷಧಿ ಹಾಕುತ್ತಿದ್ದೇವೆ ಎಂದು ಡಿ.ವಿ. ವ್ಯಂಗವಾಡಿದರು.
