ಸಂಸ್ಕಾರದ ಪಾಠ ಮನೆಯಿಂದಲೇ ಶುರುವಾಗಲಿ

ಲೋಕಬಂಧು ನ್ಯೂಸ್ | ಉಡುಪಿ, ಮೇ 24
ಈಚಿನ ದಿನಗಳಲ್ಲಿ ಬ್ರಾಹ್ಮಣ ಸಂಸ್ಕೃತಿ ಅನುಸರಣೆ ಕಡಿಮೆಯಾಗುತ್ತಿದೆ ಎಂಬ ಭೀತಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಅದನ್ನು ಉಳಿಸಿ, ಬೆಳೆಸುವ ಕಾರ್ಯ ನಡೆಯಬೇಕು. ಮುಖ್ಯವಾಗಿ ಮಕ್ಕಳಲ್ಲಿ ನಮ್ಮತನದ ಅವರಿವು ಮೂಡಿಸಿ ಆಸಕ್ತಿ ಮೂಡಿಸಬೇಕು. ಮನೆಯಿಂದಲೇ ಸಂಸ್ಕತಿ, ಸಂಸ್ಕಾರಗಳ ಪಾಠ ನಡೆಯಬೇಕು ಎಂದು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ ಮಂಜ ಆಶಿಸಿದರು.
ನಗರದ ಕಿನ್ನಿಮೂಲ್ಕಿ ಶ್ರೀದೇವಿ ಸಭಾಭವನದಲ್ಲಿ ನಡೆದ ಕನ್ನರ್ಪಾಡಿ-ಕಿನ್ನಿಮೂಲ್ಕಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.


ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ರಮೇಶ ರಾವ್ ಬೀಡು, ಡಾ. ಸೀತಾರಾಮ ಭಟ್ ದಂಡತೀರ್ಥ ಅತಿಥಿಗಳಾಗಿದ್ದರು.


ಈ ಸಂದರ್ಭದಲ್ಲಿ ದಿವ್ಯಾಂಗರಾದ ಪತ್ರಿಕಾ ವಿತರಕ ಹರೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು.


ಎಸ್ಎಸ್ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಲಯದ ಸಾಧಕರನ್ನು ಗೌರವಿಸಲಾಯಿತು.


ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಪೂರೈಸಿದ 10 ಮಂದಿ ದಂಪತಿಗಳನ್ನು ಅಭಿನಂದಿಸಲಾಯಿತು.


ಶ್ರೀ ಜಯದುರ್ಗಾಪರಮೇಶ್ವರಿ ಭಗಿನಿ ಭಜನಾ ಮಂಡಳಿ ಅಧ್ಯಕ್ಷೆ ಡಾ.ಉಷಾ ಚಡಗ, ಕೆ.ವಿ.ಆಚಾರ್ಯ, ಜನಾರ್ದನ ಭಟ್, ಮುರಳಿಕೃಷ್ಣ ಭಟ್, ಬೃಂದಾ ರಾಜೇಂದ್ರ, ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಘುಪತಿ ರಾವ್ ಕಿನ್ನಿಮೂಲ್ಕಿ ಮೊದಲಾದವರಿದ್ದರು.


ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ಎನ್. ರಾಜೇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಮಂಚಿ ಸುರೇಶ್ ರಾವ್ ವಾರ್ಷಿಕ ವರದಿ, ಸುದರ್ಶನ ಆಚಾರ್ಯ ವಾರ್ಷಿಕ  ಲೆಕ್ಕಪತ್ರ ಮಂಡಿಸಿದರು. ಪತ್ರಕರ್ತ ಕಿರಣ್ ಮಂಜನಬೈಲು ನಿರೂಪಿಸಿದರು. ವಿಜಯಲಕ್ಷ್ಮಿ ಕಿರಣ್ ವಂದಿಸಿದರು.


ಬಳಿಕ ಸಂಘದ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.