ಲೋಕಬಂಧು ನ್ಯೂಸ್ | ಉಡುಪಿ, ಮೇ 24
ಈ ಹಿಂದೆ ಮನೆ ಮನೆಗಳಲ್ಲಿ ಸಂಜೆ ವೇಳೆ ಭಜನೆ ಮಾಡುವ ಸಂಪ್ರದಾಯವಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ವಿರಳವಾಗುತ್ತಿದ್ದು, ಭಜನಾ ಮಂಡಳಿಗಳಿಂದಾಗಿ ಈ ಪರಂಪರೆ ಉಳಿದಿದೆ ಎಂದು ಕರ್ಣಾಟಕ ಬ್ಯಾಂಕ್ ಡಿಜಿಎಂ ವಾದಿರಾಜ ಭಟ್ ಹೇಳಿದರು.
ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಗುಂಡಿಬೈಲು ಬ್ರಾಹ್ಮೀ ಸಭಾಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಗಳ ಮೂಲಕ ಭಜನಾ ತಂಡಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದವರು ಹೇಳಿದರು.
ಭೀಮ ಜುವೆಲ್ಲರಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಿ. ರಾಘವೇಂದ್ರ ಭಟ್, ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಘುಪತಿ ರಾವ್ ಕಿನ್ನಿಮೂಲ್ಕಿ, ಮಾಜಿ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್., ಕಾರ್ಯದರ್ಶಿ ಅಮಿತಾ ಕ್ರಮಧಾರಿ, ಸಲಹೆಗಾರ್ತಿ ಉಷಾ ಹೆಬ್ಬಾರ್, ಪರಿಷತ್ ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಅಕ್ಷತಾ ರಾವ್ ಮತ್ತು ವೆಂಕಟೇಶ್ ರಾವ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಸ್ಪರ್ಧೆಯಲ್ಲಿ 28 ತಂಡಗಳು ಭಾಗವಹಿಸಿದ್ದು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ಪ್ರಥಮ 15 ಸಾವಿರ, ದ್ವೀತಿಯ 10 ಸಾವಿರ ಮತ್ತು ತೃತೀಯ 5 ಸಾವಿರ ರೂ. ಬಹುಮಾನ ನೀಡಿ ಗೌರವಿಸಲಾಯಿತು.
