ಕೊಡವೂರು ಮಹಾರುದ್ರ ಯಾಗ ಚಪ್ಪರ ಮುಹೂರ್ತ

ಲೋಕಬಂಧು ನ್ಯೂಸ್ | ಉಡುಪಿ, ಮೇ 3
ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ, ನಾಡಿನ ಜನರ ಸುಭಿಕ್ಷೆಗಾಗಿ ಮೇ 14ರಿಂದ 19ರ ವರೆಗೆ ನಡೆಯುವ ಮಹಾರುದ್ರ ಯಾಗದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ರವಿವಾರ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯಿತು.


ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ, ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ರುದ್ರಯಾಗ ಸಮಿತಿ ಸಂಚಾಲಕರಾದ ರಮೇಶ್ ಎಸ್. ತಿಂಗಳಾಯ, ನಂದಕಿಶೋರ್ ಕೆಮ್ಮಣ್ಣು ಮತ್ತು ಬಾಲಕೃಷ್ಣ ಕೊಡವೂರು, ಭಜನಾ ಸಂಚಾಲಕ ಧನಂಜಯ ಕಾಂಚನ್, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ ಪಾಲನ್, ಎ. ರಾಜ ಸೇರಿಗಾರ, ವಾದಿರಾಜ್ ಸಾಲ್ಯಾನ್, ಯಶೋದರ ಸಾಲ್ಯಾನ್, ಬಾಬ ಕೆ., ಉಷಾ ಆನಂದ ಸುವರ್ಣ ಮತ್ತು ಶೀಲಾ ದೇವಾಡಿಗ, ಪ್ರಮುಖರಾದ ಪಿ. ಗುರುರಾಜ್ ರಾವ್, ಯಾದವ ಅಮೀನ್, ಸದಾನಂದ ಮೂಲ್ಯ, ಬಿ. ಕುಶಲ ಶೆಟ್ಟಿ, ಆಶಾ ಚಂದ್ರಶೇಖರ್, ಸುರೇಂದ್ರ ಆಚಾರ್ಯ, ಸುನಿಲ್ ಪೂಜಾರಿ, ಶಂಕರ ಕುಂದರ್, ಹರಿಪ್ರಸಾದ್ ಮಲ್ಪೆ, ಶರತ್ ಹನುಮಾನ್ ನಗರ, ಕುಸುಮ ಕರ್ಕೇರ, ಯಶೋದ ಕೆಮ್ಮಣ್ಣು, ಸತೀಶ್ ಕಲ್ಯಾಣಪುರ, ವಿಠಲ ಪೂಜಾರಿ, ಶಾಲಿನಿ ಸಾಲ್ಯಾನ್, ಅರ್ಚನ ದೇವಾಡಿಗ, ವಿಜಯ ಭಾಸ್ಕರ, ಸಂಧ್ಯಾ ಪ್ರಕಾಶ್, ಸುಕನ್ಯ ಪೂಜಾರಿ, ಶಕುಂತಳ ಸದಾನಂದ ಉಮೇಶ್ ರಾವ್ ಕೊಡವೂರು ಮೊದಲಾದವರಿದ್ದರು.