ಕೊಡವೂರು ಮಹಾರುದ್ರ ಯಾಗ: ಮಲ್ಪೆ ಬೀಚ್‌ನಲ್ಲಿ ಜನಮನ ರಂಜಿಸಿದ ಮಂಗ್ಲಿ ಸಂಗೀತ

ಲೋಕಬಂಧು ನ್ಯೂಸ್ ಉಡುಪಿ, ಮೇ 18
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಭಾನುವಾರ ರಾತ್ರಿ ನಡೆದ ಖ್ಯಾತ ಹಿನ್ನೆಲೆ ಗಾಯಕಿ ಮಂಗ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಜನಮನ‌ ಗೆಲ್ಲುವಲ್ಲಿ ಯಶಸ್ವಿಯಾಯಿತು‌.ತುಳು ಗೀತೆಯೊಂದನ್ನು ಹಾಡುವ‌ ಮೂಲಕ ಮಂಗ್ಲಿ ಅವರು ತುಳುವರ ವಿಶೇಷ ಪ್ರೀತ್ಯಾಭಿಮಾನಗಳಿಗೆ ಕಾರಣರಾದರು.ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ, ಕೊಡವೂರು ‌ದೇವಳದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಕೊಡವೂರು ಮೊದಲಾದವರಿದ್ದರು.