ಲೋಕಬಂಧು ನ್ಯೂಸ್ ಉಡುಪಿ, ಮೇ 17
ನಗರದ ಪ್ರತಿಷ್ಠಿತ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಮೇ 30ರ ವರೆಗೆ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಪ್ರೀಮಿಯರ್ ವಜ್ರಾಭರಣಗಳ ಪ್ರದರ್ಶನ `ವಿಶ್ವ ವಜ್ರ' ಡೈಮಂಡ್ ಎಕ್ಸಿಬಿಷನ್‌ಗೆ ಶನಿವಾರ ಚಾಲನೆ ನೀಡಲಾಯಿತು.ಪ್ರದರ್ಶನವನ್ನು ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೀಣಾ ಶೆಟ್ಟಿ ಬೆಲ್ಜಿಯಂ ಕಲೆಕ್ಷನ್, ಮಣಿಪಾಲ ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಮಾನಸ ಇಟಲಿಯನ್ ಕಲೆಕ್ಷನ್, ಎಚ್‌ಆರ್ ಕನ್ಸಲ್ಟೆಂಟ್ ಡೆಲಿಶಾ ಮಥಾಯಿಸ್ ಮಿಲ್ಡ್ ಈಸ್ಟ್ ಹಾಗೂ ಮಾಹೆ ಎಂಐಟಿ ಮ್ಯಾನೇಜ್‌ಮೆಂಟ್'ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಶಹಿಸ್ತಾ ಅಬ್ದುಲ್ ಫರಾಝ್ ಸಿಂಗಾಪುರ ಕಲೆಕ್ಷನ್‌ಗಳನ್ನು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ವೀಣಾ ಶೆಟ್ಟಿ, ಸುಲ್ತಾನ್ ಸಂಸ್ಥೆಯ 9ನೇ ವಜ್ರಾಭರಣ ಪ್ರದರ್ಶನ ಇದಾಗಿದ್ದು, ಅದರಲ್ಲಿ ವಿವಿಧ ಆಭರಣಗಳ ಪ್ರದರ್ಶನ ನಡೆಯಲಿದೆ. ಉಡುಪಿ ಮಾತ್ರವಲ್ಲ ಹೊರ ಜಿಲ್ಲೆಯವರು ಕೂಡಾ ಈ ಪ್ರದರ್ಶನಕ್ಕೆ ಆಗಮಿಸಿ ವೈವಿಧ್ಯಮಯ ಆಭರಣಗಳ ಸಂಗ್ರಹದ ಅನುಭವ ಪಡೆಯಬಹುದು. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಸುಲ್ತಾನ್ ಸಂಸ್ಥೆಯ ಸಮಾಜಮುಖಿ ಕೆಲಸಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಡಾ.ಶಹಿಸ್ತಾ ಅಬ್ದುಲ್ ಫರಾಝ್ ಮಾತನಾಡಿ, ನಾನು ಚಿನ್ನಾಭರಣ ಖರೀದಿಯಲ್ಲಿ ಸುಲ್ತಾನ್‌ಗೆ ಮೊದಲ ಆದ್ಯತೆ ನೀಡುತ್ತೇನೆ. ಇಲ್ಲಿನ ಸಿಬ್ಬಂದಿಗಳ ಗ್ರಾಹಕ ಸ್ನೇಹಿ ಸೇವೆ ಅತ್ಯುತ್ತಮವಾದುದು. ಈ ಪ್ರದರ್ಶನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖಾ ವ್ಯವಸ್ಥಾಪಕ ಅಬ್ದುಲ್ ವಾಹೀದ್, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸಂತೋಷ್ ಜೆ., ಮಾರ್ಕೆಟಿಂಗ್ ಮ್ಯಾನೇಜರ್ ರಿಫಾ, ಫ್ಲೋರ್ ಮ್ಯಾನೇಜರ್ ಸಿದ್ಧಿಕ್ ಹಸನ್ ಮೊದಲಾದವರಿದ್ದರು.
ಕೃತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನದಲ್ಲಿ ಡೈಮಂಡ್ ಮೌಲ್ಯದ ಮೇಲೆ ಶೇ.20ರ ವರೆಗೆ ರಿಯಾಯಿತಿ ಮತ್ತು ಚಿನ್ನಾಭರಣಗಳ ತಯಾರಿಕಾ ಶುಲ್ಕದ ಮೇಲೆ ಶೇ.50ರ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ವಿವಿಧ ದೇಶಗಳ ವಜ್ರಾಭರಣಗಳ ವಿನೂತನ ಸಂಗ್ರಹ ಈ ಪ್ರದರ್ಶನದಲ್ಲಿದೆ.