ಲೋಕಬಂಧು ನ್ಯೂಸ್ ಉಡುಪಿ, ಮೇ 6
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾರುದ್ರಯಾಗ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಲ್ಪೆ ಮೀನುಗಾರರ ಸಂಘದಲ್ಲಿ ಮೀನುಗಾರರೊಂದಿಗೆ ಸಭೆ ನಡೆಸಲಾಯಿತು.ಮಹಾರುದ್ರಯಾಗ ಸೇವಾಕರ್ತ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಪುಣ್ಯ ಕಾರ್ಯದಲ್ಲಿ ನಾಡಿನ ಸಮಸ್ತ ಮೀನುಗಾರರು ಭಾಗವಹಿಸುವಂತೆ ಮನವಿ ಮಾಡಿ, ಅಮಂತ್ರಣ ಪತ್ರಿಕೆಯನ್ನು ಮೀನುಗಾರ ಮುಖಂಡರಿಗೆ ನೀಡಿ ಅಹ್ವಾನಿಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಕಾರ್ಯದರ್ಶಿ ಜಗನ್ನಾಥ್ ಕುಂದರ್, ಉಪಾಧ್ಯಕ್ಷರಾದ ಮಧುಕರ್ ಸುವರ್ಣ, ನಾಗರಾಜ್ ಬಿ. ಕುಂದರ್, ಮಾಜಿ ಅಧ್ಯಕ್ಷ ಶಿವಪ್ಪ ಟಿ. ಕಾಂಚನ್ ಹಾಗೂ ವಿವಿಧ ಮೀನುಗಾರರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ದೇವಳದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕಾಂಚನ್, ಪ್ರಧಾನ ಸಂಚಾಲಕ ತಾರಾನಾಥ್, ಸಂಚಾಲಕ ರಮೇಶ್ ಎಸ್. ತಿಂಗಳಾಯ, ಉಪಾಧ್ಯಕ್ಷರಾದ ರಾಮಪ್ಪ ಸಾಲ್ಯಾನ್ ಮತ್ತು ಯಾದವ್ ಅಮೀನ್ ಇದ್ದರು.