ಲೋಕಬಂಧು ನ್ಯೂಸ್ | ಉಡುಪಿ, ಮೇ 1
ನಗರದ ಬಸ್ ನಿಲ್ದಾಣ ಬಳಿ ಸಿಐಟಿಯು ಕಚೇರಿಯಿಂದ ಕವಿ ಮುದ್ದಣ ಮಾರ್ಗವಾಗಿ ವಿಮಾ ನೌಕರರ ಲಿಕೋ ಬ್ಯಾಂಕ್‌ನ ವಜ್ರ ಮಹೋತ್ಸವ ಸಭಾಂಗಣ ವರೆಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಹಾಗೂ ಪ್ರಾಧ್ಯಾಪಕ ಪ್ತೊ.ಕೆ. ಫಣಿರಾಜ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ತರ ಎಂದರು.
ಸಿಐಟಿ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಿಚಾರ ಮಂಡಿಸಿದರು.
ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.
ಎಐಟಿಯುಸಿನ ಶಿವಾನಂದ, ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಬ್ಯಾಂಕ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ನಾಗೇಶ್ ಕಾಮತ್ ಇದ್ದರು.
ಉಡುಪಿ ಜಿಲ್ಲಾ ಕಟ್ಟಡ ಸಂಘದ ಪ್ರಮುಖ ಸೈಯದ್ ಅಲಿ ಸ್ವಾಗತಿಸಿ, ವಂದಿಸಿದರು. ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಎಸ್.ಕಾಂಚನ್ ನಿರೂಪಿಸಿದರು.
