ಲೋಕಬಂಧು ನ್ಯೂಸ್ ಉಡುಪಿ, ಮೇ 28
ಈಗಾಗಲೇ ಉಡುಪಿ ಬ್ಯಾಂಕಿಂಗ್, ಕಲೆ, ಆಧ್ಯಾತ್ಮ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಆರೋಗ್ಯ ಕ್ಷೇತ್ರದಲ್ಲೂ ಅತ್ಯುತ್ತಮ ಖ್ಯಾತಿ ಗಳಿಸಿದ್ದು, ಆ ಸಾಲಿನಲ್ಲಿ ಮೆಡಿಕ್ವೆಸ್ಟ್ ಹೆಲ್ತ್‌ಕೇರ್ ಕೂಡಾ ಸೇರುವಂತಾಗಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಿಸಿದರು.ನಗರದ ಕವಿ ಮುದ್ದಣ ಮಾರ್ಗದ ಅಂದ್ರಾದೆ ಆರ್ಕೇಡ್ ನ ಮೊದಲ ಮಹಡಿಯಲ್ಲಿ ನೂತನವಾಗಿ ಆರಂಭವಾದ ಮೆಡಿಕ್ವೆಸ್ಟ್ ಹೆಲ್ತ್ ಕೇರ್ ಪ್ರಯೋಗಾಲಯವನ್ನು ಗುರುವಾರ ಉದ್ಘಾಟಿಸಿ, ಆಶೀರ್ವಚನ ನೀಡಿದರು.ಕೆಲವು ವರ್ಷಗಳ ಹಿಂದೆ ರೋಗದ ಮೂಲ ತಿಳಿಯಲು ನೆಲ್ಲೂರು, ಮುಂಬೈ, ಬೆಂಗಳೂರು ಮೊದಲಾದೆಡೆಗೆ ಹೋಗಬೇಕಿತ್ತು. ಆದರೆ, ಇಂದು ಆ ಪರಿಸ್ಥಿತಿ ಇಲ್ಲ. ಈ ನೂತನ ಪ್ರಯೋಗಾಲಯದ ಬೆಳವಣಿಗೆಯಲ್ಲಿ ಕೃಷ್ಣಾನುಗ್ರಹವಿರಲಿ ಎಂದು ಹಾರೈಸಿದರು.
ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಜ್ಯೋತಿಷಿ ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ, ಡೊಮಿನಿಕ್ ಮಸ್ಕರೇನ್ಹಸ್ ಶುಭ ಹಾರೈಸಿದರು.
ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ, ಖ್ಯಾತ ನೇತ್ರತಜ್ಞ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು.
ಮೆಡಿಕ್ವೆಸ್ಟ್ ಹೆಲ್ತ್‌ಕೇರ್ ಎಂ.ಡಿ. ರಾಘವೇಂದ್ರ ಗಂಗೊಳ್ಳಿ, ವಕೀಲ ಉಮೇಶ್ ಶೆಟ್ಟಿ ಕಳತ್ತೂರು, ಕಾಂಗ್ರೆಸ್ ಮುಖಂಡ ಪ್ರಕಾಶ್ ಅಂದ್ರಾದೆ, ನಿವೃತ್ತ ಡಿಎಫ್ಒ ರಘುರಾಮ ರಾವ್ ಮೊದಲಾದವರಿದ್ದರು.
ಐಸಿರಿ ಮತ್ತು ರಾಧಿಕ ಪ್ರಾರ್ಥಿಸಿದರು. ಎಂ.ಡಿ. ರೀನಾ ಟಿ.ಬಿ. ಸ್ವಾಗತಿಸಿದರು. ಪ್ರೊ.ಬಾಲಕೃಷ್ಣ ಮದ್ದೋಡಿ ನಿರೂಪಿಸಿ, ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ವಂದಿಸಿದರು.
ಮೆಡಿಕ್ವೆಸ್ಟ್ ಹೆಲ್ತ್‌ಕೇರ್
ವಿಶೇಷತೆ
ಮೆಡಿಕ್ವೆಸ್ಟ್ ಹೆಲ್ತ್‌ಕೇರ್ 2020ರ ನವೆಂಬರ್‌ನಲ್ಲಿ ಸಾಮಾನ್ಯ ಪ್ರಯೋಗಾಲಯವಾಗಿ ಆರಂಭಗೊಂಡು ಇದೀಗ 9 ಮಧ್ಯಮ ಗಾತ್ರದ ಪ್ರಯೋಗಾಲಯ ಮತ್ತು 16 ಸಂಗ್ರಹಣಾ ಕೇಂದ್ರ ಹೊಂದಿದೆ. ಒಟ್ಟು 25 ಶಾಖೆಗಳನ್ನು ಹೊಂದಿದೆ. ಮೆಡಿಕ್ವೆಸ್ಟ್ ಹೆಲ್ತ್‌ಕೇರ್ ಮಂಗಳೂರು ಎನ್ಎಬಿಲ್ ಪ್ರಮಾಣೀಕೃತ ಪ್ರಯೋಗಾಲಯವಾಗಿದ್ದು, ದೇಶಾದ್ಯಂತ ವಿಸ್ತರಣಾ ಯೋಜನೆ ಹೊಂದಿದೆ. ರೋಚೆ, ಮೆರಿಲ್ ಮತ್ತು ಮೆಂಡ್ರೈನಂಥ ವಿಶ್ವ ದರ್ಜೆಯ ವಿಶ್ಲೇಷಕಗಳನ್ನು ಹೊಂದಿದೆ. ಎಲ್ಲಾ ಪರೀಕ್ಷಾ ವರದಿಗಳನ್ನು ಎಂ.ಡಿ. ಪಥಾಲಜಿ, ಬಯೋಕೆಮಿಸ್ಟ್, ಮೈಕ್ರೋಬಯಾಲಜಿಸ್ಟ್ ವೈದ್ಯರು ವಿಶ್ಲೇಷಿಸುತ್ತಾರೆ. ನೂತನ ಪ್ರಯೋಗಾಲಯ ಅರ್ಹ, ತರಬೇತಿ ಪಡೆದ ತಂತಜ್ಞರಿಂದ ಕೂಡಿದ್ದು, ಎಲ್ಲಾ ವರದಿಗಳು ಯಂತ್ರಗಳಿಂದ ಸ್ವಯಂ ಚಾಲಿತವಾಗಿ ಕನಿಷ್ಠ ಮಾನವ ಹಸ್ತಕ್ಷೇಪದಿಂದ ಕೂಡಿದೆ.