ವಿದ್ಯಾರ್ಥಿ ಶಿಕ್ಷಕರ ಪುನರ್ ಮಿಲನ

ಲೋಕಬಂಧು ನ್ಯೂಸ್ | ಉಡುಪಿ, ಮೇ 25
ಕುಂಜಿಬೆಟ್ಟು ಡಾ.ಟಿ.ಎಮ್.ಎ. ಪೈ ಶಿಕ್ಷಣ ಮಹಾವಿದ್ಯಾಲಯದ 1985- 86ನೇ ಸಾಲಿನ ವಿದ್ಯಾರ್ಥಿ ಶಿಕ್ಷಕರ ಪುನರ್ ಮಿಲನ ಕಾರ್ಯಕ್ರಮ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನೆರವೇರಿತು.
ಅಹಲ್ಯಾ ರಾವ್, ನಿರ್ಮಲಾ ರಾವ್ ಹಾಗೂ ಶಶಿಕಲಾ ರಾಜವರ್ಮ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವಾಕರ ಶೆಟ್ಟಿ, ಅರುಣ ಶೆಟ್ಟಿ, ಪುತ್ತು ನಾಯ್ಕ್, ಚಿತ್ರಲೇಖಾ, ಜೋಯ್ಸ್ ಡೇಸಾ ಹಾಗೂ ರಾಜೇಶ್ವರಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸಲಾಯಿತು.


ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಮಹಾಬಲೇಶ್ವರ ರಾವ್ ಮಾತನಾಡಿದರು.


ಅಹಲ್ಯಾ ರಾವ್ ಪ್ರಾರ್ಥಿಸಿದರು. ನಿರ್ಮಲಾ ರಾವ್ ಸ್ವಾಗತಿಸಿ, ಹರಿಕೃಷ್ಣ ಹೊಳ್ಳ ನಿರೂಪಿಸಿದರು. ನಳಿನಾದೇವಿ ವಂದಿಸಿದರು.