ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 2
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವ ಭವ್ಯ ದೇಗುಲವಾಗಿ ಮೆರೆಯುತ್ತಿದ್ದು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಈಡೇರಿಸಿರುವುದು ನಮ್ಮೆಲ್ಲರ ದೊಡ್ಡ ಸೌಭಾಗ್ಯ. ದಿನವೂ ನಡೆಯುವ ರುದ್ರಯಾಗಾದಿಗಳು ಜಗತ್ತಿಗೆ ಶಾಂತಿಯನ್ನು ಉಂಟುಮಾಡಲಿ. ಇನ್ನಷ್ಟು ವೃದ್ಧಿಯನ್ನು ಕರುಣಿಸಲಿ. ಎಲ್ಲಾ ಭಗವದ್ಭಕ್ತರಿಗೆ ರುದ್ರ ದೇವರ ಆನುಗ್ರಹ ರಕ್ಷೆ ಇರಲಿ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಶನಿವಾರ ಶ್ರೀಕ್ಷೇತ್ರದಲ್ಲಿ ಸಂಸ್ಥಾನಪೂಜೆ ನಡೆಸಿ ಆಶೀರ್ವಚನ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ರುದ್ರ ದೇವರ ವಿಶೇಷ ಸನ್ನಿಧಾನವುಳ್ಳ ಪಡುಬಿದ್ರಿ ಕ್ಷೇತ್ರ, ದೇವಸ್ಥಾನ ಮತ್ತು ಭಕ್ತರು ಎಷ್ಟು ಗಟ್ಟಿಯಾಗಿದ್ದಾರೆ ಎಂಬುದಕ್ಕೆ ಒಳ್ಳೆಯ ಉದಾಹರಣೆ. ಭವ್ಯ-ಅದ್ಭುತವಾದ ದೇವಾಲಯ ಪಡುಬಿದ್ರಿಯಲ್ಲಿ ನಿರ್ಮಾಣಗೊಳ್ಳುವಂತಾಗಿದೆ. ಸಮಸ್ತರಿಗೂ ಭಗವದನುಗ್ರಹ ಇರಲಿ ಎಂದು ಹಾರೈಸಿದರು.
